ಯಾವುದು ಇಲ್ಲಿ ಶಾಶ್ವತ?
ಯಾವುದು ಇಲ್ಲಿ ನಮ್ಮ ಸ್ವಂತ?
ಈ ಬದುಕೆನ್ನುವುದೇ ಒಂದು ರೋಚಕ!
ಮುಂದೇನಾಗುವುದೋ ಎಂಬುದು ಪ್ರಶ್ನಾರ್ಥಕ ?
ಈ ಕ್ಷಣವನ್ನು ಅನುಭವಿಸುತ,
ನಗು ಪ್ರೀತಿಯನು ಹಂಚುತ
ಬದುಕೋಣ ನಮ್ಮ ಈ ಜೀವಿತ...
ಅಮ್ಮ ಎಂದರೆ ನನ್ನಮ್ಮ
ನಿನಗಾರು ಸಾಟಿ ಇಲ್ಲಮ್ಮ
ಪ್ರತಿ ಜನುಮದಲ್ಲು ನಾನೇ ನಿನ್ನ ಕಂದಮ್ಮ
ಸಾವಿರ ಜನುಮಕು ನೀನಾಗಬೇಕು ನನ್ನ ಹೆತ್ತಮ್ಮ
ನನಗಾಗಿ ನೀನೆಷ್ಟು ಶ್ರಮಿಸುವೆ
ನನಗೆ ನೋವಾದರೆ ನೀನಳುವೆ
ನನ್ನ ಖುಷಿ ನೋಡಿ ನೀ ನಗುವೆ
ನನಗೆ ಒಳಿತಾಗಲಿ ಎಂದು ಬಯಸುವೆ
ನೀ ಮಾಡುವೆ ನನಗೆ ಸಹಾಯ
ಹೋಗಲಾಡಿಸುವೆ ನನ್ನ ಭಯ
ನನ್ನ ನಿನ್ನ ನಡುವೆ ಪ್ರೀತಿಯ ವಿನಿಮಯ
ಸದಾ ಹೀಗೆ ಇರಲಿ ನಮ್ಮ ಈ ಬಾಂಧವ್ಯ
ಆ ದೇವರು ಹೇಗಿದ್ದಾನೋ ನಾ ಅರಿಯೆನೆ
ನನ್ನ ಪಾಲಿನ ದೇವತೆ ನೀನೇನೆ
ನಾ ಸದಾ ಪ್ರೀತಿಸುವೆ ನಿನ್ನನ್ನೇ
ನೀನಿರದೆ ನಾ ಬರಿ ಶೂನ್ಯನೇ
ನನ್ನ ಜೀವನ ನಿನಗೆಂದೆ ಅರ್ಪಿತ
ನಾ ಬಯಸುವೆ ನಿನ್ನ ಹಿತ
ನಾನೆಂದಿಗೂ ನಿನ್ನ ಸ್ವಂತ
ಅಮ್ಮ ನೀನಿರು ಸದಾ ನಗುನಗುತಾ
ನಿನಗೆ ನೋವಾದರೆ ಅಳುವಳು ಅವಳು
ನಿನ್ನ ಕಣ್ಣೀರ ಒರೆಸುವ ಕೈಗಳು ಅವಳದು
ಸದಾ ನಿನಗೆ ಒಳಿತನ್ನೇ ಬಯಸುವಳು
ಬಲು ಮುಗ್ದ ಮನಸು ಅವಳದು
ಎಂದೆಂದೂ ನಿನಗಾಗಿಯೇ ಬದುಕುವಳು
ಕಪಟ ಪ್ರೀತಿಯ ಎಂದಿಗೂ ತೋರಳು
ಅಪ್ಪಟ ಬಂಗಾರದ ಮನಸಿನ ಗುಣದವಳು
ಐಶ್ವರ್ಯವನ್ನು ಗಳಿಸುವುದು ಕಷ್ಟ
ಉಳಿಸಿಕೊಳ್ಳುವುದು ಕಷ್ಟ
ವ್ಯಯ ಮಾಡುವುದಷ್ಟೇ ಸುಲಭ
ಕಷ್ಟದಿಂದ ಒಲಿಯುತ್ತದೆಯೋ
ಅದೃಷ್ಟದಿಂದ ಒಲಿಯುತ್ತದೆಯೋ
ಅದರ ಇಷ್ಟದಂತೆ ಒಲಿಯುತ್ತದೆಯೋ
ಹೇಗೆ ಒಲಿದರು ಅದನ್ನು ಹಾಗೇ
ಉಳಿಸಿಕೊಳ್ಳುವುದು ಮಾತ್ರ ಕಷ್ಟ
ಪಯಣ ಶುರು ಆಗಿದೆ ಕನಸಿನ ದೋಣಿಯಲ್ಲಿ
ಸಿಲುಕಿದೆ ಇಂದು ಕಷ್ಟಗಳ ಸಾಗರದಲ್ಲಿ
ನಿನ್ನಯ ಕನಸಿನ ದೋಣಿಗೆ
ನಾವಿಕನು ನೀನೇ ಅಲ್ಲವೇ
ಭರವಸೆ ಬೇಕಿದೆ ನಿನಗೆ
ನಿನಗೆ ನೀನೇ ಧೈರ್ಯವೇ
ಮರೆಯುತ ಎಲ್ಲಾ ನೋವ
ಸೇರುವೆಯಾ ಆ ದೂರ ತೀರವ
ಮೊಗದಲ್ಲಿ ತರಿಸಿದೆ ನಗು
ಬಾಳಲ್ಲಿ ಮೂಡಿಸಿದೆ ರಂಗು
ನೋವುಗಳ ಮರೆಸಿ
ಭರವಸೆಯ ಮೂಡಿಸಿ
ಪ್ರೀತಿಯು ಅಪಾರ
ನಂಬಿಕೆಯೇ ಆಧಾರ
ಪ್ರತಿದಿನ ಸ್ನೇಹ ಸಂಗಮ
ಆದರೆ ಬಲು ಸಂಭ್ರಮ
ನಾ ಕೂತಿದ್ದೆ ಕಿಟಕಿ ಬಳಿ
ಬೀಸುತ್ತಿತ್ತು ತಂಪು ತಂಗಾಳಿ
ನಗುತಿರುವನು ಚಂದಿರ ಬಾನಿನಲ್ಲಿ
ಮಿನುಗುವ ನಕ್ಷತ್ರಗಳ ನಡುವಿನಲ್ಲಿ
ಅತಿ ಮಧುರವಾದ ನಂಟು ಈ ಗೆಳೆತನ
ಹೇಗಾಯಿತು ನಿನ್ನ ಜನನ ಅರಿಯೆನು ನಾ
ನಿನ್ನಿಂದಾಗಿ ಈ ಬಾಳಲ್ಲಿ ಹೊಸತನ
ನೀನೇನು ಮಾಯಾವಿಯಾ!
ಗೆಳೆತನದ ಬಲೆಗೆ ಬೀಳದವರು ಯಾರಿಲ್ಲ
ಈ ನಂಟಿಗೆ ಬೆಲೆ ಕಟ್ಟಲಾಗುವುದಿಲ್ಲ
ಗೆಳೆತನಕ್ಕಿಂತ ಮಿಗಿಲಾದುದು ಬೇರೇನಿಲ್ಲ
ಗೆಳೆತನ ಬಾಳಿಗೆ ಸಿಹಿ ಕೊಡುವ ರಸಗುಲ್ಲ!
ನಂಬಿಕೆ ಜೊತೆಗಿದ್ದರೆ ಈ ಸ್ನೇಹ ಶಾಶ್ವತ
ಅನುಮಾನ ಜೊತೆಯಾದರೆ ನಾಶ ಖಂಡಿತ
ಭಾವನೆಗಳಿಗೆ ಭಾವುಕವಾಗುವ ಮನಸುಗಳು
ಭಾವುಕವಾಗಿ ಬದಲಾಗಿರುವ ಭಾವನೆಗಳು
ಮಾತಿಲ್ಲದೆ ಮೌನವಾದ ಸಂಭಾಷಣೆಗಳು
ಮೌನದಿಂದಲೇ ಮಾಯವಾದ ಮಾತುಗಳು
ಕನಸು ನನಸಾಗುವಂಥ ಕಲ್ಪನೆಗಳು
ಕಲ್ಪನೆಯಾಗಿಯೇ ಉಳಿಯುವ ಕನಸುಗಳು
ಇವತ್ತು ಬೆಳಗ್ಗೆ ಹನಿ ಹನಿ ಮಳೆ ಸುರಿಸುತ್ತಿತ್ತು ನಾನು ಹಾಗೆ ಸುಮ್ಮನೆ ಮನೆಯಿಂದ ಆಚೆ ಬಂದು ತೋಟದ ಕಡೆಗೆ ಹೋದೆ. ಹಾಗೆ ಸುಮ್ಮನೆ ದಾಸವಾಳ ಗಿಡದ ಕಡೆಗೆ ಕಣ್ಣು ಹಾಯಿಸಿದೆ, ದಾಸವಾಳ ಹೂವುಗಳು ಅರಳಿ ಕಂಗೊಳಿಸುತ್ತಿದ್ದವು. ಮಳೆ ಹನಿಗಳು ಆ ದಳಗಳ ಮೇಲೆ ಹರಡಿತ್ತು. ನೋಡಲು ಅದೆಷ್ಟು ಸುಂದರವಾಗಿತ್ತು! ನಾನು ಕೈಯಲ್ಲಿದ್ದ ಫೋನ್ ತಗೊಂಡು ಹಾಗೆ ಒಂದಷ್ಟು ಫೋಟೋ ಕ್ಲಿಕ್ ಮಾಡಿದೆ.
![]() |
ಎಷ್ಟು ಸುಂದರ ಈ ದಾಸವಾಳ
ಮಳೆ ಹನಿಯಲಿ ಕಂಗೊಳಿಸಿದೆ ದಳ
ಇದರ ಬಣ್ಣವು ಕೆಂಪು
ನೋಡಿದ ಈ ಕಣ್ಣಿಗೆ ಕಂಪು!
![]() |