Sunday, December 12, 2021
🎶🤗♥
Sunday, September 12, 2021
ಪರೀಕ್ಷೆ
ಪರೀಕ್ಷೆ ಅಂದರೆ ಯಾರಿಗೆ ತಾನೇ ಭಯ, ಚಿಂತೆ ಇರಲ್ಲ ಹೇಳಿ? ಅದೆಷ್ಟು ಸಲ ಪರೀಕ್ಷೆ ಬರೆದಿದ್ದರು ಪ್ರತೀ ಸಲ ಪರೀಕ್ಷೆ ಬರೆಯಲು ಹೋದಾಗ ಅದೇ ಚಿಂತೆ,ಅದೇ ಭಯ ಕಾಡುತ್ತದೆ.ಕೆಲವರಿಗೆ ಪರೀಕ್ಷೆ ಭಯದಿಂದ ಜ್ವರನೇ ಬರುತ್ತೆ.ಇನ್ನು ಕೆಲವರಂತೂ ಪರೀಕ್ಷೆಯ ಹಿಂದಿನ ದಿನ ನಿದ್ದೆ ಬಿಟ್ಟು ಓದಿಕೊಂಡು ಬಂದಿರುತ್ತಾರೆ. ನಿದ್ದೆ ಬಿಟ್ಟು ತಲೆ ನೋವು ಒಂದು ಕಡೆ ಇರುತ್ತೆ ಇನ್ನೊಂದು ಕಡೆ ಭಯ. ಯಪ್ಪಾ ನನಗೆ ನಿದ್ದೆ ಬಿಟ್ಟು ಓದುವುದು ಅಂದ್ರೆ ಆಗಲ್ಲ ಚೆನ್ನಾಗಿ ನಿದ್ದೆ ಮಾಡಿದ್ರೆ ಮಾತ್ರ ನನಗೆ ಪರೀಕ್ಷೆ ಬರೆಯೋದಕ್ಕೆ ಆಗೋದು. ರಾತ್ರಿ ನಿದ್ದೆಗಾಗಿ ಓದುವುದನ್ನು ಬಿಟ್ಟು ಮಲಗಿದ್ದು ಉಂಟು ಆದರೆ ಓದುವುದಕಾಗಿ ನಿದ್ದೆ ಬಿಟ್ಟು ಓದಿದ ಪ್ರಸಂಗ ಬಾರಿ ಕಡಿಮೆ. ಆ ಕಡೆ ನಿದ್ದೇನು ಇಲ್ಲ ಈ ಕಡೆ ಸರಿಯಾಗಿ ಓದುವುದಕ್ಕೂ ಆಗಲ್ಲ. ನಿದ್ದೆ ಕೆಟ್ಟು ಪರೀಕ್ಷೆ ಬರೆಯೋದಕ್ಕೆ ಹೋದರೆ ನಾನು ಪರೀಕ್ಷೆ ಬರೆಯೋ ಬದಲು ನಿದ್ದೆ ಮಾಡ್ತೇನೆ ಅಷ್ಟೇ. ಈ ನಿದ್ದೆ ಬಿಟ್ಟು ಓದಿಕೊಂಡು ಚೆನ್ನಾಗಿ ಪರೀಕ್ಷೆ ಬರಿಯೋದು ತುಂಬಾನೇ ಕಷ್ಟ ಇದೆಲ್ಲ ನಿಭಾಯಿಸಿಕೊಂಡು ಪರೀಕ್ಷೆ ಬರೆಯೋರೆಲ್ಲ ತುಂಬಾನೇ ಗ್ರೇಟ್ ಅನ್ಸತ್ತೆ ನನಗೆ ಯಾಕಂದ್ರೆ ನನಗೆ ಹೇಗೆ ನಿದ್ದೆ ಬಿಟ್ಟು ಓದೋದು ತುಂಬಾನೇ ಕಷ್ಟದ ಕೆಲಸ.
![]() |
ಚಿತ್ರಕೃಪೆ - ಅಂತರ್ಜಾಲ |
ಇನ್ನು ಈ ಪರೀಕ್ಷೆ ಶುರು ಆಗುವ 30 ನಿಮಿಷದ ಮೊದಲೇ ನಮ್ಮನ್ನು ಪರೀಕ್ಷಾ ಕೊಠಡಿಯಲ್ಲಿ ಕೂರಿಸುತ್ತಾರೆ, ಆ 30 ನಿಮಿಷಗಳಲ್ಲಿ ಆಗೋ ಭಯ ಅಷ್ಟಿಷ್ಟಲ್ಲ ಪ್ರಶ್ನೆಪತ್ರಿಕೆ ಸುಲಭವಾಗಿ ಇರುತ್ತೋ ಅಥವಾ ಕಷ್ಟವಾಗಿ ಇರುತ್ತೋ ಹಾಗೆ ಹೀಗೆ ಏನೇನೋ ಆಲೋಚನೆಗಳು ತಲೆಯಲ್ಲಿ ಓಡುತ್ತಾ ಇರುತ್ತೆ. ಪ್ರಶ್ನೆಪತ್ರಿಕೆ ಕೈಗೆ ಸಿಗುವಷ್ಟರಲ್ಲಿ ನಾವು ಓದಿದ್ದು ಭಯ ಅನ್ನುವ ನದಿಯಲ್ಲಿ ಕೊಚ್ಚಿ ಹೋಗಿರುತ್ತೆ ಅಷ್ಟೇ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಮೇಲೆ ಒಂದು ಸಲ ಪೂರ್ತಿಯಾಗಿ ಎಲ್ಲಾ ಪ್ರಶ್ನೆಗಳತ್ತ ಕಣ್ಣು ಹಾಯಸಲು ಆರಂಭಿಸಿದಾಗ, ಮೊದಲನೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಾದರೆ ಅಲ್ಲಿಗೆ ಕಥೆ ಮುಗಿಯಿತು ಬಾಕಿ ಗೊತ್ತಿರುವ ಉತ್ತರಗಳು ಮರೆತು ಹೋಗುತ್ತೆ. ಉತ್ತೀರ್ಣರಾಗಬೇಕಾದರೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹಾಗೆ ಬದಿಗಿರಿಸಿ ಮುಂದಿನ ಪ್ರಶ್ನೆಗೆ ಜಿಗಿಯಬೇಕಲ್ಲವೇ! ಏನೋ ಗೊತ್ತಿರುವಷ್ಟು, ನೆನಪಿಗೆ ಬಂದಷ್ಟು ಬರೆದು ಮುಗಿಸಬೇಕು ಅಷ್ಟೇ. ಗೊತ್ತಿರುವಷ್ಟು ಬರೆದು ಮುಗಿಸಿ ಆಚೆ ಕಣ್ಣು ಹಾಯಿಸಿದರೆ ಎಲ್ಲರೂ ಗಂಭೀರವಾಗಿ ಉತ್ತರಪತ್ರಿಕೆಯಲ್ಲಿ ಬರೆಯುತ್ತಿದ್ದರೆ ನಾನು ಮಾತ್ರ ಉತ್ತರ ತಿಳಿಯದೇ ಏನು ಬರೆಯೋದು ಅನ್ನುವ ಚಿಂತೆಯಲ್ಲಿ ಮುಳುಗಿದ್ದೆ . ಆದರೆ ಏನು ಮಾಡುವುದು ಈ ಪರೀಕ್ಷೆ ಎಂಬ ಯುದ್ಧದ್ದಲ್ಲಿ ನಾವು ಒಂಟಿಯಾಗಿಯೇ ಹೊರಾಡಬೇಕು ಯಾರು ನಮ್ಮ ನೆರವಿಗೆ ಬರುವುದಿಲ್ಲ ಬರಲಾಗುವುದು ಇಲ್ಲ. ಉತ್ತಮ ಅಂಕ ಪಡೆಯಬೇಕು ಇಲ್ಲ ಕನಿಷ್ಟ ಪಕ್ಷ ಉತ್ತೀರ್ಣರಾಗಿ ಪರೀಕ್ಷೆ ಎಂಬ ಯುದ್ಧ ಗೆಲ್ಲಬೇಕು, ಅದಕ್ಕಾಗಿ 3 ಗಂಟೆ ಪರೀಕ್ಷೆಯ ಕೊಠಡಿಯಲ್ಲಿ ಪೆನ್ನು ಹಿಡಿದು ಉತ್ತರಪತ್ರಿಕೆಯಲ್ಲಿ ತಲೆ ಉಪಯೋಗಿಸಿ ಏನೋ ಉತ್ತರ ಬರೆಯಬೇಕು. ಸರಿಯಾಗಿ ನಿದ್ದೇನು ಮಾಡದೆ ಸರಿಯಾಗಿ ಓದೋಕೂ ಆಗದೆ ಚಡಪಡಿಸಿವುದಕ್ಕಿಂತ ಆರಾಮಾಗಿ ಮಲಗಿ ಆದಷ್ಟು ಓದುದುವುದೇ ಉತ್ತಮ ಅನ್ನುವುದು ನನ್ನ ಅಭಿಪ್ರಾಯ. ಆಮೇಲೆ ನಿದ್ದೆ ಬಿಟ್ಟು ತಲೆ ಕೆಟ್ಟು ಪರೀಕ್ಷೆ ಬರೆಯೋ
ಹೇಗೋ ಏನೋ 3 ಗಂಟೆ ಕಳೆದು ಪರೀಕ್ಷಾ ಕೊಠಡಿಯಿಂದ ಆಚೆ ಬರುವ ಹೊತ್ತಿಗೆ ತಲೆ ನೋವು ಶುರು ಆಗಿರುತ್ತೆ. ಆಚೆ ಬಂದು ನೋಡಿದರೆ ಸಾಕು ಕೆಲವರು ಪ್ರಶ್ನೆಪತ್ರಿಕೆಯ ಉತ್ತರಗಳ ಬಗ್ಗೆ ಚರ್ಚಿಸಲು ಶುರು ಮಾಡಿಕೊಂಡಿರುತ್ತಾರೆ , ಮೊದಲೇ ಉತ್ತರ ಗೊತ್ತಿಲದೇ ಏನೋ ಒಂದು ಉತ್ತರ ಬರೆದು ಬಂದಿರುತ್ತೇವೆ ಇನ್ನು ಇವರ ಚರ್ಚೆ ಕೇಳಿದ್ರೆ ಇರೋ ತಲೆ ಕೆಡುವುದು ಪಕ್ಕಾ. ಆಮೇಲೆ ತಲೆ ಕೆಟ್ಟರೆ ಮುಂದಿನ ಪರೀಕ್ಷೆ ಬರೆಯೋದು ಯಾರು ಅಲ್ವಾ? ಅದಕ್ಕೆ ನಾನು ಪರೀಕ್ಷಾ ಕೊಠಡಿಯಿಂದ ಆಚೆ ಬಂದ ನಂತರ ಬ್ಯಾಗ್ ಹಾಕಿಕೊಂಡು ಸೀದ ಮನೆಗೆ ಹೊರಡೋದು.
ಇನ್ನು ಮನೆಗೆ ಬಂದ ತಕ್ಷಣ ಅಮ್ಮ ಕೇಳುವ ಮೊದಲ ಪ್ರಶ್ನೆನೇ "ಹೇಗಿತ್ತು ಇವತ್ತಿನ ಪರೀಕ್ಷೆ? ಚೆನ್ನಾಗಿ ಬರೆದೆ ತಾನೇ ಒಳ್ಳೆ ಅಂಕ ಸಿಗುತ್ತಾ ಇಲ್ವಾ"? ಹೀಗೆ ಅಮ್ಮ ಕೇಳೋದು ಹೊಸತೇನಲ್ಲ ಯಾವಾಗ್ಲೂ ಇದೇ ತರ ಕೇಳೋದು ಅಂತ ನನಗೆ ಗೊತ್ತು,ಅದಕ್ಕೆ ನಾನು ಉತ್ತರ ರೆಡಿ ಮಾಡಿಕೊಂಡಿರುತ್ತೇನೆ. ಅಯ್ಯೋ ಅಮ್ಮಾ ಇವತ್ತಿನ ಪರೀಕ್ಷೆ ಎಷ್ಟು ಕಷ್ಟ ಇತ್ತು ಯಾವುದಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ,ನನಗೆ ಮಾತ್ರ ಅಲ್ಲಾ ಎಲ್ಲರಿಗೂ ಕಷ್ಟ ಆಗಿತ್ತು. ಕಡಿಮೆ ಅಂಕ ಬಂದ್ರೆ ಬೈಯೋದ್ಯಕ್ಕೆ ರೆಡಿ ಆಗಿರು ಅಮ್ಮ ಅಂತ ಹೇಳುತ್ತಿದ್ದೆ ನಾನು ಹೀಗೆ ಹೇಳೋದು ಹೊಸತೇನಲ್ಲ ನಾನು ಪ್ರತಿ ಸಲ ಇದೇ ಮಾತು ಹೇಳುತ್ತಿದ್ದೆ ಅದು ಅಮ್ಮನಿಗೂ ಗೊತ್ತಿರುವ ವಿಚಾರ. ಅಮ್ಮ ಪಾಪ ಏನೂ ಹೇಳದೆ ನನಗೆ ಸಮಾಧಾನ ಮಾಡುತ್ತಿದ್ದರು. ಪರ್ವಾಗಿಲ್ಲ ಬಿಡು ಮುಂದಿನ ಸಲ ಚೆನ್ನಾಗಿ ಬರೆದು ಒಳ್ಳೆ ಅಂಕ ಪಡ್ಕೊಂಡ್ರೆ ಆಯ್ತು ಅಂತ ಹೇಳಿ ಸುಮ್ಮನಾಗುತ್ತಿದ್ರು. ನನ್ನ ಮಗಳಿಗೆ ಒಳ್ಳೆ ಅಂಕ ಬಂದು ಪಾಸ್ ಆಗ್ಲಿ ಅಂತ ಅದೆಷ್ಟು ದೇವರಿಗೆ ಹರಕೆ ಕಟ್ಟಿಕೊಂಡಿರುತ್ತಾರೆ ಅಂತ ಅವರಿಗೆ ಅಷ್ಟೇ ಗೊತ್ತು ಎಲ್ಲಾ ತಾಯಂದಿರು ಹೀಗೇನೇ...
ಪರೀಕ್ಷೆ ದಿನ ಆಗೋ ಭಯ ಒಂದು ರೀತಿ ಆದ್ರೆ ಇನ್ನು ಪರೀಕ್ಷೆ ಮುಗಿಸಿದ ಮೇಲೆ ಫಲಿತಾಂಶದ ಭಯ ಇನ್ನೊಂದು ರೀತಿ. ಯಾವುದೋ ಒಂದು ವಿಷಯದಲ್ಲಿ ಚೆನ್ನಾಗಿಯೇ ಬರೆದಿರ್ತಿವಿ ಆವಾಗ ಒಳ್ಳೆ ಅಂಕ ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಮಾತ್ರ ನಮಗೆ ಇರಲ್ಲ ಆದ್ರೆ ಯಾವುದೋ ವಿಷಯ ಕಷ್ಟ ಇದ್ದು ಆ ಪರೀಕ್ಷೆ ಚೆನ್ನಾಗಿ ಬರಿಯದೇ ಇದ್ದಾಗ ನಮಗೆ ಕಡಿಮೆ ಅಂಕ ಸಿಗಬಹುದು ಅಥವಾ ನಾವು ಫೇಲ್ ಆಗ್ತಿವಿ ಅನ್ನೋ ಕಾನ್ಫಿಡೆನ್ಸ್ ಅದೆಲ್ಲಿಂದ ಬರತ್ತೆ ಅನ್ನೋದು ಗೊತ್ತಾಗಲ್ಲ. ಇನ್ನು ಇವತ್ತು ಫಲಿತಾಂಶ ಪ್ರಕಟ ಆಗುತ್ತೆ ಅಂತ ತಿಳಿದಾಗ ಆಗೋ ಭಯ ಪರೀಕ್ಷೆ ಬರಿಯೋ ಸಮಯದಲ್ಲಿ ಆಗುವ ಭಯಕ್ಕಿಂತ ದುಪ್ಪಟ್ಟಾಗಿರುತ್ತದೆ. ನಾನು ಖಂಡಿತ ಫೇಲ್ ಆಗ್ತೀನಿ ಅನ್ನೋ ಭಯ. ಏನ್ ಮಾಡೋದು ಫಲಿತಾಂಶ ನೋಡಲೇಬೇಕು ಅಲ್ವಾ ಹೇಗೋ ಗಟ್ಟಿ ಮನಸ್ಸು ಮಾಡಿ ನೋಡಿದ್ರೆ ಪಾಸ್ ಅಂತ ಇರುತ್ತೆ. ನಾವ್ ಯಾವಾಗ ಫೇಲ್ ಅಗ್ತಿವಿ ಅಂತ ಅನ್ಕೊಂಡು ಇರ್ತೀವಿ ನೋಡಿ ಆವಾಗ ಪಾಸ್ ಅಂತ ಗೊತ್ತಾದಾಗ ಆಗೋ ಖುಷಿ , ಸಮಾಧಾನ, ನಾವ್ ಚೆನ್ನಾಗಿ ಪರೀಕ್ಷೆ ಬರ್ದು ಪಾಸ್ ಆದಾಗ ಸಿಗೋ ಖುಷಿಗಿಂತ ದುಪ್ಪಟ್ಟಾಗಿ ಇರುತ್ತೆ. ಪಾಸ್ ಅಂತ ಗೊತ್ತಾದಾಗ ಮೊದಲಿದ್ದ ಚಿಂತೆ ಭಯ ಆ ಕ್ಷಣದಲ್ಲಿ ಮಾಯ ಆಗುತ್ತೆ. ಪರೀಕ್ಷೆಯಲ್ಲಿ ನಾನು ಓದಿದ್ದು ಮರೆತು ಹೋಗಿ ನನ್ನ ಜ್ಞಾಪನಶಕ್ತಿ ನನಗೆ ಕೈ ಕೊಟ್ಟಿರಬಹುದು ಆದರೆ ನಾನು ನಂಬಿದ ದೇವರು ಕೈ ಕೊಟ್ಟಿಲ್ಲ. ಅಮ್ಮನ ಹರಕೆ ಮತ್ತು ಹಾರೈಕೆ ಎರಡು ಇದ್ದರೆ ಸಾಕು ನಮಗೆ ಯಾವತ್ತಿಗೂ ಯಾವ ವಿಷಯದಲ್ಲಿಯೂ ಸೋಲು ನಷ್ಟ ಉಂಟಾಗುವುದಿಲ್ಲ, ಹಾಗೊಂದು ವೇಳೆ ಫೇಲ್ ಆದರೂ ಅದಕ್ಕೆ ಚಿಂತೆ ಪಡಬೇಕಿಲ್ಲ ಮತ್ತೊಂದು ಸಲ ಪರೀಕ್ಷೆ ಬರೆದು ಇನ್ನೂ ಉತ್ತಮ ಅಂಕ ಪಡೆದುಕೊಳ್ಳಬಹುದು. ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ , ಜೀವನದಲ್ಲಿ ಎದುರಿಸಬೇಕಾದ ಪರೀಕ್ಷೆಗಳು ತುಂಬಾನೇ ಇವೆ.
ನನಗೆ ಪವರ್ ಆಫ್ ಯೂಥ್ ಹಾಡಿನ ಸಾಲುಗಳು ನೆನಪಾಯಿತು ಅದೆಷ್ಟು ಚೆನ್ನಾಗಿದೆ ಮತ್ತು ಅಷ್ಟು ನಿಜವಾಗಿದೆ ಅದರ ಕೆಲವು ಸಾಲುಗಳು ನೀವೇ ನೋಡಿ.
ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೇ ಕನ್ನಡಿ
ನಿನ್ನ ನಂಬಿ ಸಾಗು
ಪಟ್ಟರೆ ಶ್ರಮವ
ಒಳ್ಳೆಯ ದಿನವ ಕಾಣುವೆ ನೀನು
ಪರೀಕ್ಷೆಯಲ್ಲಿ ಫೈಲ್ ಆಗೋದ್ರು
ಬದುಕು ಕಟ್ಟುವ.
ಪರೀಕ್ಷೆಯಲ್ಲಿ ಫೈಲ್ ಆದ್ರೂ ಪರ್ವಾಗಿಲ್ಲ ಬದುಕು ಕಟ್ಟೋದು ಮುಖ್ಯ. ಪರೀಕ್ಷೆ ಬಗ್ಗೆ ಜಾಸ್ತಿ ತಲೆ ಕೆಡೆಸಿಕಳ್ಳದೆ ಆರಾಮಾಗಿ ಬರೆಯಿರಿ. ಹಿಂದೆ ಆಗಿದ್ದು ಮುಂದೆ ಆಗುವುದು ಎಲ್ಲಾ ಒಳ್ಳೆಯದಕ್ಕೆ. ಏನಾಗಲಿ ಮುಂದೆ ಸಾಗುತ್ತಾ ಇರೋಣ ಅಷ್ಟೇ.
Saturday, August 28, 2021
ಮಾಸ್ಕ್
![]() |
ಚಿತ್ರಕೃಪೆ - ಅಂತರ್ಜಾಲ |
![]() |
ಚಿತ್ರಕೃಪೆ - ಅಂತರ್ಜಾಲ |
Saturday, June 19, 2021
ದಾಸವಾಳ
ದಾಸವಾಳ
ಇವತ್ತು ಬೆಳಗ್ಗೆ ಹನಿ ಹನಿ ಮಳೆ ಸುರಿಸುತ್ತಿತ್ತು ನಾನು ಹಾಗೆ ಸುಮ್ಮನೆ ಮನೆಯಿಂದ ಆಚೆ ಬಂದು ತೋಟದ ಕಡೆಗೆ ಹೋದೆ. ಹಾಗೆ ಸುಮ್ಮನೆ ದಾಸವಾಳ ಗಿಡದ ಕಡೆಗೆ ಕಣ್ಣು ಹಾಯಿಸಿದೆ, ದಾಸವಾಳ ಹೂವುಗಳು ಅರಳಿ ಕಂಗೊಳಿಸುತ್ತಿದ್ದವು. ಮಳೆ ಹನಿಗಳು ಆ ದಳಗಳ ಮೇಲೆ ಹರಡಿತ್ತು. ನೋಡಲು ಅದೆಷ್ಟು ಸುಂದರವಾಗಿತ್ತು! ನಾನು ಕೈಯಲ್ಲಿದ್ದ ಫೋನ್ ತಗೊಂಡು ಹಾಗೆ ಒಂದಷ್ಟು ಫೋಟೋ ಕ್ಲಿಕ್ ಮಾಡಿದೆ.
![]() |
ಎಷ್ಟು ಸುಂದರ ಈ ದಾಸವಾಳ
ಮಳೆ ಹನಿಯಲಿ ಕಂಗೊಳಿಸಿದೆ ದಳ
ಇದರ ಬಣ್ಣವು ಕೆಂಪು
ನೋಡಿದ ಈ ಕಣ್ಣಿಗೆ ಕಂಪು!
![]() |
-
ಕ್ರಷ್ ಅಂತೆ ಕ್ರಷ್! ಹೌದು ಎಲ್ಲರ ಲೈಫ್ ಅಲ್ಲಿ ಒಬ್ರು ಕ್ರಷ್ ಅಂತ ಇದ್ದೇ ಇರ್ತಾರೆ ಬಿಡಿ. ಆದ್ರೆ ನನ್ ಬೆಸ್ಟ್ ಫ್ರೆಂಡ್ ಇದ್ದಾಳೆ ಇವಳಿಗೆ ಇರೋ ಕ್ರಷ್ ಒಂದಲ್ಲ ಎರಡಲ್ಲ...
-
ಅಮ್ಮ ಎಂದರೆ ನನ್ನಮ್ಮ ನಿನಗಾರು ಸಾಟಿ ಇಲ್ಲಮ್ಮ ಪ್ರತಿ ಜನುಮದಲ್ಲು ನಾನೇ ನಿನ್ನ ಕಂದಮ್ಮ ಸಾವಿರ ಜನುಮಕು ನೀನಾಗಬೇಕು ನನ್ನ ಹೆತ್ತಮ್ಮ ನನಗಾಗಿ ನೀನೆಷ್ಟು ಶ್ರಮಿಸುವೆ ನನ...
-
ಅತ್ತು ಸೋತಿದೆ ಈ ಹೃದಯ ನಿನಗೆ ಇದರ ಅರಿವಿದೆಯಾ ಈ ನೋವಿಗೆ ಬೇಕಿದೆ ಸಾಂತ್ವಾನ ನೀ ನೀಡುವೆಯಾ ನಗುವಿನ ಆಹ್ವಾನ