ಇವತ್ತು ಅರ್ಜೆಂಟ್ ಆಗಿ ಪೋಸ್ಟ್ ಆಫೀಸ್ ಹೋಗಿ ಪೋಸ್ಟ್ ಕಾರ್ಡ್ ಒಂದನ್ನು ತರಬೇಕಾಗಿತ್ತು, ನಾನು 3 ಗಂಟೆಗೆ ಹೋದೆ, ಹೋಗುವ ಗಡಿಬಿಡಿಯಲ್ಲಿ ಪರ್ಸ್ ಕೂಡ ತಗೆದುಕೊಂಡು ಹೋಗಿರಲಿಲ್ಲ, ಕೈಯಲ್ಲಿ 100ರೂಪಾಯಿ ತೆಗೆದುಕೊಂಡು ಹೋಗಿದ್ದೆ. ಅಲ್ಲಿ ಹೋಗಿ ಒಂದು ಅಂಚೆ ಕಾರ್ಡ್ ಬೆಲೆ ಎಷ್ಟು ಅಂತ ಕೇಳಿದೆ ಅದಕ್ಕೆ ಆ ಮೇಡಮ್ ಹೇಳಿದ್ರು ನೀವು ಎರಡು ಕಾರ್ಡ್ ತೆಗೆದುಕೊಳ್ಳಿ ಏರಡು ಕಾರ್ಡ್ ನ ಬೆಲೆ ಒಂದು ರೂಪಾಯಿ ಅಂತ, ಮೇಡಮ್ ನನ್ನ ಬಳಿ ಚೇಂಜ್ ಇಲ್ಲ ಬರುವ ಅವಸರದಲ್ಲಿ 100 ರೂಪಾಯಿ ತಂದಿದ್ದೇನೆ ಅಂದೆ. ನೋಡಮ್ಮ ನಮಗೆ ಒಂದು ರೂಪಾಯಿ ಅಷ್ಟೇ ಬೇಕು ಜಾಸ್ತಿನೂ ಬೇಡ ಕಮ್ಮಿನೂ ಬೇಡ ಅಂದರು. ಅಯ್ಯೋ ಒಂದು ರೂಪಾಯಿಗೆ ಎಲ್ಲಿಗಪ್ಪ ಹೋಗೋದು ಅಂತ ಚಿಂತೆ ಶುರು ಆಯಿತು, ಆಫೀಸ್ ಗೆ ವಾಪಸ್ ಹೋಗಿ ಒಂದು ರೂಪಾಯಿ ತರುವ ಅಂದರೆ NH 66 highway ಮತ್ತೆ ದಾಟಬೇಕು ಅದು ನನಗೆ ಬಾರಿ ಕಷ್ಟದ ಕೆಲಸ. ನೀವು ಸ್ವಲ್ಪ ಹೊತ್ತು wait ಮಾಡಿ ನಿಮಗೆ ಕಾರ್ಡ್ ಮಾಡಿ ಕೊಡುತ್ತಾರೆ ಎಂದು ಹೇಳಿದರು ನಾನು ಹಾ ಸರಿ ಎಂದು ಹೇಳಿ ಅಲ್ಲೇ ಕುರ್ಚಿಯಲ್ಲಿ ಕುಳಿತುಕೊಂಡೆ. ನನ್ನ ತಲೆಯಲ್ಲಿ ಒಂದೇ ಪ್ರಶ್ನೆ ಓಡುತಿತ್ತು ಒಂದು ರೂಪಾಯಿ ಚೇಂಜ್ ಗೆ ಎಲ್ಲಿ ಹೋಗೋದು ಅಂತ! ದೇವ್ರು ಏನೋ ಒಂದು ದಾರಿ ಕೊಟ್ಟೇ ಕೊಡ್ತಾನೆ ಅಂತ ಹಾಗೆ ಸುಮ್ಮನೆ ಕುಳಿತುಕೊಂಡೆ. ಸ್ವಲ್ಪ ಹೊತ್ತಿನ ಬಳಿಕ ನನಗೆ ಕಾರ್ಡ್ ರೆಡಿ ಮಾಡಿ ಕೊಟ್ರು. ಥ್ಯಾಂಕ್ಯೂ ಮೇಡಂ ಆದರೆ ನನ್ನ ಬಳಿ ಒಂದು ರೂಪಾಯಿ ಇಲ್ಲ ಅಂದ ಮತ್ತೊಂದು ಬಾರಿ ಹೇಳಿದೆ ಅದಕ್ಕೆ ಅವರು ನೋಡಮ್ಮ ಅಲ್ಲಿ ಸರ್ ಹತ್ರ ಹೇಳು ಅಂದ್ರು. ನಾನು ಅವರ ಬಳಿ ಹೋಗಿ ಅದನ್ನೇ ಹೇಳಿದೆ ಅದಕ್ಕೆ ಆ ಸರ್ ಒಂದು ರೂಪಾಯಿ ಕೊಡಿ ಚೇಂಜ್ ಇಲ್ಲ ಅಂದ್ರು. ಏನು ಮಾಡೋದು ಗೊತ್ತಾಗಿಲ್ಲ, ಅಯ್ಯೋ ದೇವ್ರೆ ಎನ್ ಮಾಡ್ಲಿ ಅಂತ ಮನಸಲ್ಲೇ ಅಂದುಕೊಂಡೆ ಅಷ್ಟರಲ್ಲಿ ಇನ್ನೊಬ್ಬರು ಮೇಡಂ ನನ್ನ ಕರೆದು ಕೇಳಿದ್ರು ಮೇಡಂ ಈ ಟೇಬಲ್ ಮೇಲೆ ಒಂದು ರೂಪಾಯಿ ಇಟ್ಟಿದ್ದು ನೀವೇನಾ ಅಂತ ನಾನು ಹೇಳಿದೆ ನಾನು ಇಟ್ಟಿಲ್ಲ ಅಂತ, ಹೌದಾ ಸರಿ ಪರ್ವಾಗಿಲ್ಲ ಬಿಡಿ ನಿಮ್ ಹತ್ರ ಚೇಂಜ್ ಇಲ್ಲ ಅಲ್ವಾ ಇದು ನೀವೇ ಕೊಟ್ಟಿದ್ದು ಅಂತ ಕನ್ಸಿಡರ್ ಮಾಡ್ತೀವಿ ನೀವ್ ಇನ್ನು ಹೋಗಿ ಅಂದ್ರು. ಅಬ್ಬಾ ದೇವ್ರೆ ಕಾಪಾಡಿದೆ ನನ್ನ ಅಂತ ದೇವ್ರಿಗೆ ಮನಸಲ್ಲೇ ಥ್ಯಾಂಕ್ಸ್ ಹೇಳಿ ಅಲ್ಲಿನ ಅಧಿಕಾರಿಗಳಿಗೆ ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟು ಬಂದೆ. ಇಲ್ಲಿ ಎರಡು ವಿಷಯ ತುಂಬಾ ದೊಡ್ಡದು ಅನಿಸ್ತು ಒಂದು ಏನಂದ್ರೆ ಒಂದು ರೂಪಾಯಿ ಅನ್ನೋದು ಸಣ್ಣ ಅಮೌಂಟ್ ಆಗಿತ್ತು ಆದರೆ ನನಗೆ ಆ ಕ್ಷಣಕ್ಕೆ ಅದು ದೊಡ್ಡ ಅಮೌಂಟ್ ಥರ ಅನ್ನಿಸ್ತು ಕೈಯಲ್ಲಿ 100 ರೂಪಾಯಿ ಇದ್ದರೂ ಕೂಡ ಒಂದು ರೂಪಾಯಿಯ ಬೆಲೆ ಜಾಸ್ತಿ ಆದ ಹಾಗೆ ಆಯಿತು.ಇನ್ನೊಂದು ವಿಷಯ ಏನಂದ್ರೆ ಆ ಟೇಬಲ್ ಮೇಲೆ ಇದ್ದ ಒಂದು ರೂಪಾಯಿ ಎಲ್ಲಿಂದ ಬಂತು ಅನ್ನೋದು, ನಾನು ಸುಮಾರು ಹೊತ್ತು ಅಲ್ಲೇ ಕುಳಿತಿದ್ದೆ ಆದರೆ ನನಗೆ ಒಂದು ರೂಪಾಯಿ ಕಾಣಿಸಿಲ್ಲ, ಆ ದೇವರೇ ಬಂದು ನನಗೊಂದು ಪುಟ್ಟ ಸಹಾಯ ಮಾಡಿದ ಹಾಗೆ ಆಯಿತು.
No comments:
Post a Comment