Friday, June 18, 2021

ಆ ಗುಲಾಬಿಯಂತೆ


ಈ ಜೀವನ ಗುಲಾಬಿ ಹೂವಿನ ತೋಟದಂತೆ 
ನಾವು ಸುಂದರ ಗುಲಾಬಿ ಹೂವುಗಳು
ಸುಖ ಎಂಬ ಮಳೆಯಲ್ಲಿ ಮಿಂದು ಬೆಳೆಯಬೇಕಾದರೆ
ಕಷ್ಟ ಎಂಬ ಬಿರುಗಾಳಿಗೆ ಸಿಲುಕಲೇಬೇಕು
ಅವಮಾನ ಅನುಮಾನ ಎಂಬ ಸುಡು ಬಿಸಿಲಿಗೆ ಮೈ ಒಡ್ಡಿ ನಿಲ್ಲಬೇಕು
ನಿನ್ನ ಹಿತೈಷಿಗಳಿಗೆ ಕೋಮಲ ದಳವಾಗು
ಶತ್ರುಗಳಿಗೆ ತಿರುಗೇಟಿನ ಮುಳ್ಳಾಗು
ಭಕ್ಷಕನ ಭಯ ಬೇಡ ನಿನಗೆ 
ಕಣ್ಣಿಗೆ ಕಾಣದ ರಕ್ಷಕ ಇದ್ದಾನೆ ಈ ಬಾಳಿಗೆ

6 comments: