Sunday, June 18, 2023
Sunday, December 12, 2021
🎶🤗♥
Monday, September 13, 2021
ನನಗೆ ಮೊದಲಿನಿಂದಲೂ ಮೂವಿ ನೋಡೋ ಹುಚ್ಚು . ಸಮಯ ಸಿಕ್ಕಾಗಲೆಲ್ಲಾ ಮೂವಿ ನೋಡುತ್ತಿರುತ್ತೇನೆ. ಒಂದು ಒಳ್ಳೆ ಮೂವಿ ನೋಡಿದ್ರೆ ಅದೇನೋ ಸಮಾಧಾನ, ಖುಷಿ ಆಗುತ್ತೆ. ಮೂವಿ ನೋಡುತ್ತಾ ಇರಬೇಕಾದರೆ ವಾಸ್ತವವನ್ನು ಮರೆತು ಸಿನೆಮಾ ಪ್ರಪಂಚದಲ್ಲಿ ಮುಳುಗಿ ಹೋಗಿರುತ್ತವೆ.
ಕೆಲವೊಂದು ಸಲ ಬೋರ್ ಆಗುತ್ತದೆ ಎಂದು ಮೂವಿ ನೋಡಿದರೆ ಇನ್ನೂ ಕೆಲವು ಸಲ ಮೂವಿ ನೋಡಿ ಬೋರ್ ಆಗುವುದು ಉಂಟು. ಒಬ್ಬೊಬ್ಬರಿಗೆ ಒಂದೊದು ತರಹದ ಮೂವಿ ಇಷ್ಟ ಆಗುತ್ತೆ. ನಾನು ನನಗೆ ಸಸ್ಪೆನ್ಸ್ ಥ್ರಿಲ್ಲರ್ ಮೂವೀಸ್ ಅಂದ್ರೆ ಜಾಸ್ತಿ ಇಷ್ಟ. ಕೆಲವು ಮೂವೀಸ್ ನಮ್ಮ ಮನಸಿನ ಮೇಲೆ ಜಾಸ್ತಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಪಾತ್ರ ಆಗಿರಬಹುದು ಅಥವಾ ಕೆಲವು ಸನ್ನಿವೇಶಗಳು ನಮಗೆ ವಾಸ್ತವದಲ್ಲಿ ಸಂಬಂಧಿಸಿದಂತೆ ಅನಿಸುತ್ತದೆ, ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ.
ಲಾಕ್ಡೌನ್ ಸಮಯದಲ್ಲಿ ಬರೀ ಮೂವೀಸ್ ನೋಡಿದ್ದೆ ಆಯ್ತು. ಹೊಸ ಮೂವೀಸ್ OTT ರಿಲೀಸ್ ಆಗುತ್ತಿದ್ದಂತೆ ಅದನ್ನು ನೋಡುವ ಕಾತುರ ಜಾಸ್ತಿ ಹಾಗೆ ದಿನ ಒಂದು ಮೂವಿ ನೋಡುತ್ತಿದ್ದೆ.
2020-2021ರಲ್ಲಿ ನನಗೆ ಇಷ್ಟವಾದ ಕೆಲವು ಮೂವೀಸ್ ಇವು.
Dia
Love mocktail
Gypsy
Kannum Kannum Kollaiyadithaal
Oh My Kadavule
Penguin
Soorarai Pottru
Ala Vaikunthapurramloo
Ashwathama
HIT: The First Case
Ninnila Ninnila
Yuvaratna
Teddy
Karnan
Netrikann
Shershah
Tuck Jagadish
ನನಗೆ ಇಷ್ಟವಾದ ಮೂವಿ ನಿಮಗೆ ಇಷ್ಟವಾಗದೇ ಇರಬಹುದು!
Sunday, September 12, 2021
ಪರೀಕ್ಷೆ
ಪರೀಕ್ಷೆ ಅಂದರೆ ಯಾರಿಗೆ ತಾನೇ ಭಯ, ಚಿಂತೆ ಇರಲ್ಲ ಹೇಳಿ? ಅದೆಷ್ಟು ಸಲ ಪರೀಕ್ಷೆ ಬರೆದಿದ್ದರು ಪ್ರತೀ ಸಲ ಪರೀಕ್ಷೆ ಬರೆಯಲು ಹೋದಾಗ ಅದೇ ಚಿಂತೆ,ಅದೇ ಭಯ ಕಾಡುತ್ತದೆ.ಕೆಲವರಿಗೆ ಪರೀಕ್ಷೆ ಭಯದಿಂದ ಜ್ವರನೇ ಬರುತ್ತೆ.ಇನ್ನು ಕೆಲವರಂತೂ ಪರೀಕ್ಷೆಯ ಹಿಂದಿನ ದಿನ ನಿದ್ದೆ ಬಿಟ್ಟು ಓದಿಕೊಂಡು ಬಂದಿರುತ್ತಾರೆ. ನಿದ್ದೆ ಬಿಟ್ಟು ತಲೆ ನೋವು ಒಂದು ಕಡೆ ಇರುತ್ತೆ ಇನ್ನೊಂದು ಕಡೆ ಭಯ. ಯಪ್ಪಾ ನನಗೆ ನಿದ್ದೆ ಬಿಟ್ಟು ಓದುವುದು ಅಂದ್ರೆ ಆಗಲ್ಲ ಚೆನ್ನಾಗಿ ನಿದ್ದೆ ಮಾಡಿದ್ರೆ ಮಾತ್ರ ನನಗೆ ಪರೀಕ್ಷೆ ಬರೆಯೋದಕ್ಕೆ ಆಗೋದು. ರಾತ್ರಿ ನಿದ್ದೆಗಾಗಿ ಓದುವುದನ್ನು ಬಿಟ್ಟು ಮಲಗಿದ್ದು ಉಂಟು ಆದರೆ ಓದುವುದಕಾಗಿ ನಿದ್ದೆ ಬಿಟ್ಟು ಓದಿದ ಪ್ರಸಂಗ ಬಾರಿ ಕಡಿಮೆ. ಆ ಕಡೆ ನಿದ್ದೇನು ಇಲ್ಲ ಈ ಕಡೆ ಸರಿಯಾಗಿ ಓದುವುದಕ್ಕೂ ಆಗಲ್ಲ. ನಿದ್ದೆ ಕೆಟ್ಟು ಪರೀಕ್ಷೆ ಬರೆಯೋದಕ್ಕೆ ಹೋದರೆ ನಾನು ಪರೀಕ್ಷೆ ಬರೆಯೋ ಬದಲು ನಿದ್ದೆ ಮಾಡ್ತೇನೆ ಅಷ್ಟೇ. ಈ ನಿದ್ದೆ ಬಿಟ್ಟು ಓದಿಕೊಂಡು ಚೆನ್ನಾಗಿ ಪರೀಕ್ಷೆ ಬರಿಯೋದು ತುಂಬಾನೇ ಕಷ್ಟ ಇದೆಲ್ಲ ನಿಭಾಯಿಸಿಕೊಂಡು ಪರೀಕ್ಷೆ ಬರೆಯೋರೆಲ್ಲ ತುಂಬಾನೇ ಗ್ರೇಟ್ ಅನ್ಸತ್ತೆ ನನಗೆ ಯಾಕಂದ್ರೆ ನನಗೆ ಹೇಗೆ ನಿದ್ದೆ ಬಿಟ್ಟು ಓದೋದು ತುಂಬಾನೇ ಕಷ್ಟದ ಕೆಲಸ.
![]() |
ಚಿತ್ರಕೃಪೆ - ಅಂತರ್ಜಾಲ |
ಇನ್ನು ಈ ಪರೀಕ್ಷೆ ಶುರು ಆಗುವ 30 ನಿಮಿಷದ ಮೊದಲೇ ನಮ್ಮನ್ನು ಪರೀಕ್ಷಾ ಕೊಠಡಿಯಲ್ಲಿ ಕೂರಿಸುತ್ತಾರೆ, ಆ 30 ನಿಮಿಷಗಳಲ್ಲಿ ಆಗೋ ಭಯ ಅಷ್ಟಿಷ್ಟಲ್ಲ ಪ್ರಶ್ನೆಪತ್ರಿಕೆ ಸುಲಭವಾಗಿ ಇರುತ್ತೋ ಅಥವಾ ಕಷ್ಟವಾಗಿ ಇರುತ್ತೋ ಹಾಗೆ ಹೀಗೆ ಏನೇನೋ ಆಲೋಚನೆಗಳು ತಲೆಯಲ್ಲಿ ಓಡುತ್ತಾ ಇರುತ್ತೆ. ಪ್ರಶ್ನೆಪತ್ರಿಕೆ ಕೈಗೆ ಸಿಗುವಷ್ಟರಲ್ಲಿ ನಾವು ಓದಿದ್ದು ಭಯ ಅನ್ನುವ ನದಿಯಲ್ಲಿ ಕೊಚ್ಚಿ ಹೋಗಿರುತ್ತೆ ಅಷ್ಟೇ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಮೇಲೆ ಒಂದು ಸಲ ಪೂರ್ತಿಯಾಗಿ ಎಲ್ಲಾ ಪ್ರಶ್ನೆಗಳತ್ತ ಕಣ್ಣು ಹಾಯಸಲು ಆರಂಭಿಸಿದಾಗ, ಮೊದಲನೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಾದರೆ ಅಲ್ಲಿಗೆ ಕಥೆ ಮುಗಿಯಿತು ಬಾಕಿ ಗೊತ್ತಿರುವ ಉತ್ತರಗಳು ಮರೆತು ಹೋಗುತ್ತೆ. ಉತ್ತೀರ್ಣರಾಗಬೇಕಾದರೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹಾಗೆ ಬದಿಗಿರಿಸಿ ಮುಂದಿನ ಪ್ರಶ್ನೆಗೆ ಜಿಗಿಯಬೇಕಲ್ಲವೇ! ಏನೋ ಗೊತ್ತಿರುವಷ್ಟು, ನೆನಪಿಗೆ ಬಂದಷ್ಟು ಬರೆದು ಮುಗಿಸಬೇಕು ಅಷ್ಟೇ. ಗೊತ್ತಿರುವಷ್ಟು ಬರೆದು ಮುಗಿಸಿ ಆಚೆ ಕಣ್ಣು ಹಾಯಿಸಿದರೆ ಎಲ್ಲರೂ ಗಂಭೀರವಾಗಿ ಉತ್ತರಪತ್ರಿಕೆಯಲ್ಲಿ ಬರೆಯುತ್ತಿದ್ದರೆ ನಾನು ಮಾತ್ರ ಉತ್ತರ ತಿಳಿಯದೇ ಏನು ಬರೆಯೋದು ಅನ್ನುವ ಚಿಂತೆಯಲ್ಲಿ ಮುಳುಗಿದ್ದೆ . ಆದರೆ ಏನು ಮಾಡುವುದು ಈ ಪರೀಕ್ಷೆ ಎಂಬ ಯುದ್ಧದ್ದಲ್ಲಿ ನಾವು ಒಂಟಿಯಾಗಿಯೇ ಹೊರಾಡಬೇಕು ಯಾರು ನಮ್ಮ ನೆರವಿಗೆ ಬರುವುದಿಲ್ಲ ಬರಲಾಗುವುದು ಇಲ್ಲ. ಉತ್ತಮ ಅಂಕ ಪಡೆಯಬೇಕು ಇಲ್ಲ ಕನಿಷ್ಟ ಪಕ್ಷ ಉತ್ತೀರ್ಣರಾಗಿ ಪರೀಕ್ಷೆ ಎಂಬ ಯುದ್ಧ ಗೆಲ್ಲಬೇಕು, ಅದಕ್ಕಾಗಿ 3 ಗಂಟೆ ಪರೀಕ್ಷೆಯ ಕೊಠಡಿಯಲ್ಲಿ ಪೆನ್ನು ಹಿಡಿದು ಉತ್ತರಪತ್ರಿಕೆಯಲ್ಲಿ ತಲೆ ಉಪಯೋಗಿಸಿ ಏನೋ ಉತ್ತರ ಬರೆಯಬೇಕು. ಸರಿಯಾಗಿ ನಿದ್ದೇನು ಮಾಡದೆ ಸರಿಯಾಗಿ ಓದೋಕೂ ಆಗದೆ ಚಡಪಡಿಸಿವುದಕ್ಕಿಂತ ಆರಾಮಾಗಿ ಮಲಗಿ ಆದಷ್ಟು ಓದುದುವುದೇ ಉತ್ತಮ ಅನ್ನುವುದು ನನ್ನ ಅಭಿಪ್ರಾಯ. ಆಮೇಲೆ ನಿದ್ದೆ ಬಿಟ್ಟು ತಲೆ ಕೆಟ್ಟು ಪರೀಕ್ಷೆ ಬರೆಯೋ
ಹೇಗೋ ಏನೋ 3 ಗಂಟೆ ಕಳೆದು ಪರೀಕ್ಷಾ ಕೊಠಡಿಯಿಂದ ಆಚೆ ಬರುವ ಹೊತ್ತಿಗೆ ತಲೆ ನೋವು ಶುರು ಆಗಿರುತ್ತೆ. ಆಚೆ ಬಂದು ನೋಡಿದರೆ ಸಾಕು ಕೆಲವರು ಪ್ರಶ್ನೆಪತ್ರಿಕೆಯ ಉತ್ತರಗಳ ಬಗ್ಗೆ ಚರ್ಚಿಸಲು ಶುರು ಮಾಡಿಕೊಂಡಿರುತ್ತಾರೆ , ಮೊದಲೇ ಉತ್ತರ ಗೊತ್ತಿಲದೇ ಏನೋ ಒಂದು ಉತ್ತರ ಬರೆದು ಬಂದಿರುತ್ತೇವೆ ಇನ್ನು ಇವರ ಚರ್ಚೆ ಕೇಳಿದ್ರೆ ಇರೋ ತಲೆ ಕೆಡುವುದು ಪಕ್ಕಾ. ಆಮೇಲೆ ತಲೆ ಕೆಟ್ಟರೆ ಮುಂದಿನ ಪರೀಕ್ಷೆ ಬರೆಯೋದು ಯಾರು ಅಲ್ವಾ? ಅದಕ್ಕೆ ನಾನು ಪರೀಕ್ಷಾ ಕೊಠಡಿಯಿಂದ ಆಚೆ ಬಂದ ನಂತರ ಬ್ಯಾಗ್ ಹಾಕಿಕೊಂಡು ಸೀದ ಮನೆಗೆ ಹೊರಡೋದು.
ಇನ್ನು ಮನೆಗೆ ಬಂದ ತಕ್ಷಣ ಅಮ್ಮ ಕೇಳುವ ಮೊದಲ ಪ್ರಶ್ನೆನೇ "ಹೇಗಿತ್ತು ಇವತ್ತಿನ ಪರೀಕ್ಷೆ? ಚೆನ್ನಾಗಿ ಬರೆದೆ ತಾನೇ ಒಳ್ಳೆ ಅಂಕ ಸಿಗುತ್ತಾ ಇಲ್ವಾ"? ಹೀಗೆ ಅಮ್ಮ ಕೇಳೋದು ಹೊಸತೇನಲ್ಲ ಯಾವಾಗ್ಲೂ ಇದೇ ತರ ಕೇಳೋದು ಅಂತ ನನಗೆ ಗೊತ್ತು,ಅದಕ್ಕೆ ನಾನು ಉತ್ತರ ರೆಡಿ ಮಾಡಿಕೊಂಡಿರುತ್ತೇನೆ. ಅಯ್ಯೋ ಅಮ್ಮಾ ಇವತ್ತಿನ ಪರೀಕ್ಷೆ ಎಷ್ಟು ಕಷ್ಟ ಇತ್ತು ಯಾವುದಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ,ನನಗೆ ಮಾತ್ರ ಅಲ್ಲಾ ಎಲ್ಲರಿಗೂ ಕಷ್ಟ ಆಗಿತ್ತು. ಕಡಿಮೆ ಅಂಕ ಬಂದ್ರೆ ಬೈಯೋದ್ಯಕ್ಕೆ ರೆಡಿ ಆಗಿರು ಅಮ್ಮ ಅಂತ ಹೇಳುತ್ತಿದ್ದೆ ನಾನು ಹೀಗೆ ಹೇಳೋದು ಹೊಸತೇನಲ್ಲ ನಾನು ಪ್ರತಿ ಸಲ ಇದೇ ಮಾತು ಹೇಳುತ್ತಿದ್ದೆ ಅದು ಅಮ್ಮನಿಗೂ ಗೊತ್ತಿರುವ ವಿಚಾರ. ಅಮ್ಮ ಪಾಪ ಏನೂ ಹೇಳದೆ ನನಗೆ ಸಮಾಧಾನ ಮಾಡುತ್ತಿದ್ದರು. ಪರ್ವಾಗಿಲ್ಲ ಬಿಡು ಮುಂದಿನ ಸಲ ಚೆನ್ನಾಗಿ ಬರೆದು ಒಳ್ಳೆ ಅಂಕ ಪಡ್ಕೊಂಡ್ರೆ ಆಯ್ತು ಅಂತ ಹೇಳಿ ಸುಮ್ಮನಾಗುತ್ತಿದ್ರು. ನನ್ನ ಮಗಳಿಗೆ ಒಳ್ಳೆ ಅಂಕ ಬಂದು ಪಾಸ್ ಆಗ್ಲಿ ಅಂತ ಅದೆಷ್ಟು ದೇವರಿಗೆ ಹರಕೆ ಕಟ್ಟಿಕೊಂಡಿರುತ್ತಾರೆ ಅಂತ ಅವರಿಗೆ ಅಷ್ಟೇ ಗೊತ್ತು ಎಲ್ಲಾ ತಾಯಂದಿರು ಹೀಗೇನೇ...
ಪರೀಕ್ಷೆ ದಿನ ಆಗೋ ಭಯ ಒಂದು ರೀತಿ ಆದ್ರೆ ಇನ್ನು ಪರೀಕ್ಷೆ ಮುಗಿಸಿದ ಮೇಲೆ ಫಲಿತಾಂಶದ ಭಯ ಇನ್ನೊಂದು ರೀತಿ. ಯಾವುದೋ ಒಂದು ವಿಷಯದಲ್ಲಿ ಚೆನ್ನಾಗಿಯೇ ಬರೆದಿರ್ತಿವಿ ಆವಾಗ ಒಳ್ಳೆ ಅಂಕ ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಮಾತ್ರ ನಮಗೆ ಇರಲ್ಲ ಆದ್ರೆ ಯಾವುದೋ ವಿಷಯ ಕಷ್ಟ ಇದ್ದು ಆ ಪರೀಕ್ಷೆ ಚೆನ್ನಾಗಿ ಬರಿಯದೇ ಇದ್ದಾಗ ನಮಗೆ ಕಡಿಮೆ ಅಂಕ ಸಿಗಬಹುದು ಅಥವಾ ನಾವು ಫೇಲ್ ಆಗ್ತಿವಿ ಅನ್ನೋ ಕಾನ್ಫಿಡೆನ್ಸ್ ಅದೆಲ್ಲಿಂದ ಬರತ್ತೆ ಅನ್ನೋದು ಗೊತ್ತಾಗಲ್ಲ. ಇನ್ನು ಇವತ್ತು ಫಲಿತಾಂಶ ಪ್ರಕಟ ಆಗುತ್ತೆ ಅಂತ ತಿಳಿದಾಗ ಆಗೋ ಭಯ ಪರೀಕ್ಷೆ ಬರಿಯೋ ಸಮಯದಲ್ಲಿ ಆಗುವ ಭಯಕ್ಕಿಂತ ದುಪ್ಪಟ್ಟಾಗಿರುತ್ತದೆ. ನಾನು ಖಂಡಿತ ಫೇಲ್ ಆಗ್ತೀನಿ ಅನ್ನೋ ಭಯ. ಏನ್ ಮಾಡೋದು ಫಲಿತಾಂಶ ನೋಡಲೇಬೇಕು ಅಲ್ವಾ ಹೇಗೋ ಗಟ್ಟಿ ಮನಸ್ಸು ಮಾಡಿ ನೋಡಿದ್ರೆ ಪಾಸ್ ಅಂತ ಇರುತ್ತೆ. ನಾವ್ ಯಾವಾಗ ಫೇಲ್ ಅಗ್ತಿವಿ ಅಂತ ಅನ್ಕೊಂಡು ಇರ್ತೀವಿ ನೋಡಿ ಆವಾಗ ಪಾಸ್ ಅಂತ ಗೊತ್ತಾದಾಗ ಆಗೋ ಖುಷಿ , ಸಮಾಧಾನ, ನಾವ್ ಚೆನ್ನಾಗಿ ಪರೀಕ್ಷೆ ಬರ್ದು ಪಾಸ್ ಆದಾಗ ಸಿಗೋ ಖುಷಿಗಿಂತ ದುಪ್ಪಟ್ಟಾಗಿ ಇರುತ್ತೆ. ಪಾಸ್ ಅಂತ ಗೊತ್ತಾದಾಗ ಮೊದಲಿದ್ದ ಚಿಂತೆ ಭಯ ಆ ಕ್ಷಣದಲ್ಲಿ ಮಾಯ ಆಗುತ್ತೆ. ಪರೀಕ್ಷೆಯಲ್ಲಿ ನಾನು ಓದಿದ್ದು ಮರೆತು ಹೋಗಿ ನನ್ನ ಜ್ಞಾಪನಶಕ್ತಿ ನನಗೆ ಕೈ ಕೊಟ್ಟಿರಬಹುದು ಆದರೆ ನಾನು ನಂಬಿದ ದೇವರು ಕೈ ಕೊಟ್ಟಿಲ್ಲ. ಅಮ್ಮನ ಹರಕೆ ಮತ್ತು ಹಾರೈಕೆ ಎರಡು ಇದ್ದರೆ ಸಾಕು ನಮಗೆ ಯಾವತ್ತಿಗೂ ಯಾವ ವಿಷಯದಲ್ಲಿಯೂ ಸೋಲು ನಷ್ಟ ಉಂಟಾಗುವುದಿಲ್ಲ, ಹಾಗೊಂದು ವೇಳೆ ಫೇಲ್ ಆದರೂ ಅದಕ್ಕೆ ಚಿಂತೆ ಪಡಬೇಕಿಲ್ಲ ಮತ್ತೊಂದು ಸಲ ಪರೀಕ್ಷೆ ಬರೆದು ಇನ್ನೂ ಉತ್ತಮ ಅಂಕ ಪಡೆದುಕೊಳ್ಳಬಹುದು. ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ , ಜೀವನದಲ್ಲಿ ಎದುರಿಸಬೇಕಾದ ಪರೀಕ್ಷೆಗಳು ತುಂಬಾನೇ ಇವೆ.
ನನಗೆ ಪವರ್ ಆಫ್ ಯೂಥ್ ಹಾಡಿನ ಸಾಲುಗಳು ನೆನಪಾಯಿತು ಅದೆಷ್ಟು ಚೆನ್ನಾಗಿದೆ ಮತ್ತು ಅಷ್ಟು ನಿಜವಾಗಿದೆ ಅದರ ಕೆಲವು ಸಾಲುಗಳು ನೀವೇ ನೋಡಿ.
ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೇ ಕನ್ನಡಿ
ನಿನ್ನ ನಂಬಿ ಸಾಗು
ಪಟ್ಟರೆ ಶ್ರಮವ
ಒಳ್ಳೆಯ ದಿನವ ಕಾಣುವೆ ನೀನು
ಪರೀಕ್ಷೆಯಲ್ಲಿ ಫೈಲ್ ಆಗೋದ್ರು
ಬದುಕು ಕಟ್ಟುವ.
ಪರೀಕ್ಷೆಯಲ್ಲಿ ಫೈಲ್ ಆದ್ರೂ ಪರ್ವಾಗಿಲ್ಲ ಬದುಕು ಕಟ್ಟೋದು ಮುಖ್ಯ. ಪರೀಕ್ಷೆ ಬಗ್ಗೆ ಜಾಸ್ತಿ ತಲೆ ಕೆಡೆಸಿಕಳ್ಳದೆ ಆರಾಮಾಗಿ ಬರೆಯಿರಿ. ಹಿಂದೆ ಆಗಿದ್ದು ಮುಂದೆ ಆಗುವುದು ಎಲ್ಲಾ ಒಳ್ಳೆಯದಕ್ಕೆ. ಏನಾಗಲಿ ಮುಂದೆ ಸಾಗುತ್ತಾ ಇರೋಣ ಅಷ್ಟೇ.
Saturday, August 28, 2021
ಮಾಸ್ಕ್
![]() |
ಚಿತ್ರಕೃಪೆ - ಅಂತರ್ಜಾಲ |
![]() |
ಚಿತ್ರಕೃಪೆ - ಅಂತರ್ಜಾಲ |
Wednesday, June 23, 2021
ನಾಳೆ ಮಾಡ್ತೀನಿ!
ನಾಳೆ ಮಾಡ್ತೀನಿ!
ಅದೇನೇ ಕೆಲಸ ಇದ್ರು ನಾಳೆ ಮಾಡ್ತೀನಿ,ಮತ್ತೆ ಮಾಡ್ತೀನಿ ಅನ್ನೋದ್ರಲ್ಲೇ ಟೈಮ್ ವೇಸ್ಟ್ ಮಾಡ್ತೀವಿ. ಅದೆಷ್ಟು ಸೋಮಾರಿತನ ನಮಗೆ!
ನಾಳೆ ನಾಳೆ ಅಂತ ಹೇಳಿದ್ದೆ ಬಂತು! ಕೆಲವು ಕೆಲಸಗಳಂತೂ ನಾಳೆ ನಾಳೆ ಎಂದು ಹೇಳಿ ಕೊನೆಗೆ ಮರೆವುಗಳ ಪಟ್ಟಿಯಲ್ಲಿ ಮೂಲೆ ಸೇರುತ್ತವೆ ಅಷ್ಟೇ!
ಕೆಲಸ ಎಷ್ಟೇ ಸುಲಭ ಆಗಿರ್ಲಿ ಅಥವಾ ಕಷ್ಟ ಆಗಿರ್ಲಿ ನಾಳೆ ಮಾಡ್ತೀನಿ, ಆಮೇಲೆ ನೋಡ್ತೀನಿ ಬಿಡಿ ಅನ್ನೋದೇ ನಮ್ಮ ಖಾಯಂ ಉತ್ತರ ಆಗಿರುತ್ತೆ.
ಅದೊಂದು ಹಾಡು ಇದ್ಯಲ್ಲ ನಾಳೆ ಮಾಡುವ ಕೆಲಸ ಇಂದೇ ಮಾಡು ಆ ನಾಳೆ ಎಂಬ ಮಾತ ಮುಂದೆ ದೂಡು ಅಂತ, ಈ ಸಾಲುಗಳನ್ನು ಕೇಳ್ತಾ ಇದ್ರೆ ಆ ಕ್ಷಣಕ್ಕೆ ಅನ್ಸುತ್ತೆ ನಾಳೆ ಮಾಡೋ ಕೆಲಸ ಇಂದೇ ಮಾಡಿ ಮುಗಿಸೋಣ ಅಂತ. ಬರೀ ಅನ್ಸೋದು ಅಷ್ಟೇ ! ನಾವು ಕೆಲಸ ಮಾಡೋಣ ಅಂತ ರೆಡಿ ಆದ್ರೆ ನಮ್ಮ ತಲೆ ಏನು ಹೇಳುತ್ತೆ? ಇಂದು ಮಾಡೋ ಕೆಲಸ ನಾಳೆ ಮಾಡು ಈಗಿರೋ ಈ ಕ್ಷಣವನ್ನು ಎಂಜಾಯ್ ಮಾಡು.. ಹೌದು ನಂಗಂತೂ ಹೀಗೆ ಅನ್ಸೋದು ಆಯ್ತಾ! ಹೀಗೆ ಅಂದುಕೊಂಡು ಮಜಾ ಏನೋ ಮಾಡ್ತೀವಿ ಆದ್ರೆ ಈ ಟೈಮ್ ಅನ್ನೋದು ನಮಗೆ ಚೆನ್ನಾಗಿ ಪಾಠ ಕಲಿಸುತ್ತೆ . ನಾವು ಈ ಕ್ಷಣ ಮಜಾ ಮಾಡಿದ್ರೆ ಮುಂದೆ ಅದರ ದುಪ್ಪಟ್ಟು ಕೆಲಸ ಮಾಡುವಂತೆ ಮಾಡಿಸುತ್ತೆ.
ಒಂದೊಂದು ಸಲ ನಮಗೆ ಏನೋ ಕೆಲಸ ಮಾಡೋಣ ಅನ್ನೋ ಮನಸಾಗುತ್ತೆ ಆವಾಗ ನೋಡಿ ನಮಗೆ ಸಮಯದ ಅಭಾವ ಉಂಟಾಗುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ಹೇಳಬೇಕಾದರೆ ಈ ನಾಳೆ ಮಾಡ್ತೀನಿ,ನಾಳೆ ಓದುತ್ತೀನಿ ಅನ್ನೋದು ಇದ್ದಿದ್ದೇ. ಪರೀಕ್ಷೆಗೆ ಒಂದು ತಿಂಗಳು ಮೊದಲೇ ವೇಳಾಪಟ್ಟಿ ಕೊಟ್ಟಿದ್ದರು ಕೂಡ ಮತ್ತೆ ಓದುತ್ತೇನೆ ನಾಳೆ ಓದುತ್ತೇನೆ ಅಂತ ಎಷ್ಟೋ ನಾಳೆಗಳನ್ನು ತಳ್ಳಿ ಆ ಓದೋ ನಾಳೆ ಬರೋದು ಪರೀಕ್ಷೆಯ ಹಿಂದಿನ ದಿನ ಮಾತ್ರ. ಪರೀಕ್ಷೆಯ ಬಗ್ಗೆ ಯಾವತ್ತೂ ಇಲ್ಲದ ಆ ಭಯ, ಆತಂಕ, ನಡುಕ ಹುಟ್ಟೋದು ಆ ಪರೀಕ್ಷೆಯ ಹಿಂದಿನ ದಿನ ಮಾತ್ರ! ಅಯ್ಯೋ ನಾಳೆ ಪರೀಕ್ಷೆ, ಇವತ್ತು ನಾಳೆ ಅಂತ ಹೇಳಿ ಕೂತ್ರೆ ಪರೀಕ್ಷೆಯಲ್ಲಿ ಬರಿಯೋದು ಏನು ಅನ್ನೋ ಭಯ ಹುಟ್ಟುತ್ತೆ. ಇಷ್ಟೆಲ್ಲಾ ಆದ್ರೂ ನಾವು ಪ್ರತೀ ಪರೀಕ್ಷೆಯಲ್ಲಿ ಮಾಡೋದು ಇದನ್ನೇ.. ನಾಳೆ ನಾಳೆ ನಾಳೆ ಅಂತ ಹೇಳಿ, ನಾಳೆ ಪರೀಕ್ಷೆ ಅನ್ನೋ ದಿನಕ್ಕೆ ಕಾಯೋದು..
ನಾಳೆ ಕೆಲಸ ಇವತ್ತು ಮಾಡಿಲ್ಲ ಅಂದ್ರು ಪರ್ವಾಗಿಲ್ಲ ಬಿಡಿ, ಇವತ್ತಿನ ಕೆಲಸ ನಾಳೆ ನಾಳೆ ಅಂತ ಹೇಳಿ ಸುಮ್ನೆ ಟೈಮ್ ವೇಸ್ಟ್ ಮಾಡ್ಬೇಡಿ ಅಷ್ಟೇ.
Monday, June 14, 2021
ಹುಟ್ಟುಹಬ್ಬ
ಹುಟ್ಟುಹಬ್ಬ
ಪ್ರತಿಯೊಬ್ಬರು ಆಚರಿಸುವ ಹಬ್ಬ ಅಂದ್ರೆ ಅದು ಹುಟ್ಟುಹಬ್ಬ ! ಹಹಹ ಹೌದು ಎಲ್ಲರಿಗೂ ಹುಟ್ಟುಹಬ್ಬ ಅಂದ್ರೆ ವಿಶೇಷ ಮತ್ತು ಅದನ್ನು ಎಲ್ಲರೂ ಆಚರಿಸುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ.
ಹುಟ್ಟುಹಬ್ಬ ಅಂದ್ರೆ ಏನೋ ಒಂತರ ಸಂತಸ, ಉಲ್ಲಾಸ, ಉತ್ಸಾಹ.
ನಮ್ಮ ಬಾಲ್ಯದಲ್ಲಿ ಹುಟ್ಟುಹಬ್ಬ ಅಂದ್ರೆ ಸಾಕು ಸಂಭ್ರಮವೇ ಸಂಭ್ರಮ. ಅಪ್ಪ ಅಮ್ಮ ಕೊಡಿಸೋ ಹೊಸ ಬಟ್ಟೆ, ಅಣ್ಣ ಅಕ್ಕ ಕೊಡಿಸೋ ಉಡುಗೊರೆಗಾಗಿ ನಾವು ಹಾತೊರೆಯುತ್ತಾ ಇದ್ದೆವು. ಶಾಲೆಗೆ ಹೊಸ ಬಟ್ಟೆ ಹಾಕಿಕೊಂಡು ಒಂದು ಬಾಕ್ಸ್ ಚಾಕೋಲೇಟ್ ಹಿಡಿದುಕೊಂಡು ತರಗತಿಗೆ ಹೋಗುತ್ತಿದ್ದ ಹಾಗೆ ಎಲ್ಲರಿಗೂ ತಿಳಿಯುತ್ತೆ ನಮ್ಮ ಹುಟ್ಟುಹಬ್ಬ ಅಂತ,ತರಗತಿಯ ಎಲ್ಲರೂ ಸೇರಿ ಶುಭಾಶಯ ತಿಳಿಸುತ್ತಾರೆ. ಯಾರದೋ ಹುಟ್ಟುಹಬ್ಬ ಅಂತ ಗೊತ್ತಾದ್ರೆ ಸಾಕು ನಮಗೆ ಚಾಕೋಲೇಟ್ ಸಿಗುತ್ತೆ ಅನ್ನೋ ಖುಷಿ. ಚಾಕೋಲೇಟ್ ಕೊಡಿಸೋದಕ್ಕೆ ಅಮ್ಮ ಅಪ್ಪನ ಪೀಡಿಸುತ್ತಿದ್ದೆವು. ನಾವು ಬೆಳೆದಂತೆ ನಾವು, ನಮ್ಮ ಸುತ್ತ ಮುತ್ತ ಎಲ್ಲವೂ ಬದಲಾಗುತ್ತದೆ ಅಲ್ವಾ. ಈಗೆಲ್ಲಾ ಹಾಗೆ ಸೇರಿ ವಿಶ್ ಮಾಡೋದು ಎಲ್ಲಿದೆ ಹೇಳಿ? ಈಗ ನಾವು ವಿಶ್ ಮಾಡೋದು ವಾಟ್ಸಪ್, ಫೇಸ್ಬುಕ್ ಅಂತ ಸ್ಟೇಟಸ್ ಅಲ್ಲಿ ಅಲ್ವಾ!!? ಕೆಲವರು ಅಂತೂ ಒಂದೇ ಮನೇಲಿ ಇದ್ರು ಕೂಡ ಬರಿ ವಾಟ್ಸಪ್ ಅಲ್ಲಿ ವಿಶ್ ಮಾಡ್ತಾರೆ , ಬಾಯಿ ತುಂಬಾ ಮಾತಾಡಿ ವಿಶ್ ಮಾಡೋ ಸಮಾಧಾನ ಎಲ್ಲಿದೆ ಹೇಳಿ!
ನಾವಿರುವ ತಾಣ ಯಾವುದು ಅಂದ್ರೆ ಸಾಮಾಜಿಕ ಜಾಲತಾಣ ಅನ್ನೋ ಮಟ್ಟಿಗೆ ನಮ್ಮ ಮನಸ್ಥಿತಿ ಬದಲಾಗಿದೆ!
ಬಾಲ್ಯದಲ್ಲಿ ನಮಗಿದ್ದ ಆ ಮುಗ್ಧತೆ, ಆ ಭಾವುಕತೆ ಈಗೆಲ್ಲಿದೆ ಎಲ್ಲವೂ ಬದಲಾಗಿದೆ ಅಷ್ಟೇ. ಆಗೆಲ್ಲ ಎಲ್ಲರಿಗೂ ವಿಶ್ ಮಾಡುತ್ತಾ ಇದ್ದೆವು ಈಗ ಹೇಗೆ ಅಂದ್ರೆ ಅವರು ನಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ರೆ ಮಾತ್ರ ನಾವು ವಿಶ್ ಮಾಡೋದು, ಇಲ್ಲ ಅಂದ್ರೆ ನಾವು ಯಾಕೆ ವಿಶ್ ಮಾಡ್ಬೇಕು ಅನ್ನೋದು ನಮ್ಮ ಮನಸ್ಥಿತಿ. ನೋಡಿ ಎಷ್ಟೊಂದು ಬದಲಾಗಿದೆ ಎಲ್ಲ ಅಂತ.
ಹುಟ್ಟುಹಬ್ಬಕ್ಕೆ ಮಧ್ಯರಾತ್ರಿ 12 ಗಂಟೆಗೆ ವಿಶ್ ಮಾಡೋದನ್ನ ಮೊದಲು ಯಾರು ಶುರು ಮಾಡಿದ್ದು ಅನ್ನೋದು ಗೊತ್ತಿಲ್ಲ ಆದ್ರೆ ಇದನ್ನು ತುಂಬಾ ಜನ ಅನುಸರಿಸುತ್ತಾರೆ. 12 ಗಂಟೆಗೆ ಎದ್ದು ವಿಶ್ ಮಾಡೋದು ಅದರಲ್ಲು ಮೊದಲು ಯಾರು ವಿಶ್ ಮಾಡುತ್ತಾರೋ ಅದೇ ಅವರ ಹುಟ್ಟುಹಬ್ಬಕ್ಕೆ ಮೊದಲ ವಿಶ್ ಅಂತೆ! ಅಲ್ಲ ಫಸ್ಟ್ ವಿಶ್ ಅನ್ನೋದು ನಿಜ ಆಗಿದ್ರೆ ಮೊದ್ಲು ಅಮ್ಮ ಅಪ್ಪ 12 ಗಂಟೆಗೆ ಎದ್ದು ವಿಶ್ ಮಾಡ್ತಿದ್ರು ಅಲ್ವಾ! ಅಮ್ಮ ಅಪ್ಪ ಪ್ರತಿ ದಿನ ನಮ್ಮ ಒಳಿತಿಗಾಗಿ ಮನಸಲ್ಲಿ ವಿಶ್ ಮಾಡ್ತಾ ಇರ್ತಾರೆ ಅವರು ಅದನ್ನು ಬಾಯಿ ಬಿಟ್ಟು ಹೇಳುವುದಿಲ್ಲ ಅಷ್ಟೇ. ಫಸ್ಟ್ ವಿಶ್ ಅನ್ನೋದು ಏನೇ ಇದ್ರೂ ಅದು ಅಮ್ಮ ಅಪ್ಪ ಅವರದ್ದೇ ಆಗಿರುತ್ತೆ ಅವ್ರು ಹೇಳ್ಕೊಳ್ಳಿ ಹೇಳ್ದೆ ಇರ್ಲಿ. 12ಗಂಟೆ ಆಗ್ಲಿ ಯಾವುದೇ ಟೈಮ್ ಆಗಿರ್ಲಿ ಒಳ್ಳೆ ಮನಸಿಂದ ವಿಶ್ ಮಾಡೋದು ಮುಖ್ಯ ಅಷ್ಟೇ. 12 ಗಂಟೆಗೆ ವಿಶ್ ಮಾಡೋದು ತಪ್ಪು ಅಂತ ಹೇಳ್ತಿಲ್ಲ ಆದ್ರೆ 12 ಗಂಟೆಗೆ ವಿಶ್ ಮಾಡೋದು ಮಾತ್ರ ವಿಶೇಷ ಅಂತ ಭಾವಿಸೋದು ಸರಿ ಅಲ್ಲ ಅನ್ನೋದು ನನ್ನ ಅನಿಸಿಕೆ. ವಿಶ್ ಮಾಡೋದು ಮಾಡದೇ ಇರೋದು ಅವರವರಿಗೆ ಬಿಟ್ಟಿದ್ದು, ನಾವು ಮನಸಿನಲ್ಲಿ ಶುಭ ಹಾರೈಸಿದರೆ ಅಷ್ಟೇ ಸಾಕು ಬೇರೆ ಯಾವ ವಿಶ್ ಬೇಕಾಗಿಲ್ಲ.
Sunday, June 13, 2021
ಹೆಸರು
ಹೆಸರು
Friday, June 11, 2021
ಮರೆವು ಮತ್ತು ನೆನಪುಗಳ ಜೊತೆಯಲ್ಲಿ
ನೋವು - ನಲಿವು, ಅಳು - ನಗು, ಕಷ್ಟ - ಸುಖ ಹೇಗೆ ನಮ್ಮ ಜೀವನದಲ್ಲಿ ಇರುತ್ತದೆಯೋ ಹಾಗೆಯೇ ಮರೆವು - ನೆನಪು ಕೂಡ ಇರುತ್ತದೆ. ಪ್ರತಿ ದಿನ ಮರೆವು ನೆನಪುಗಳೊಂದಿಗೆ ನಮ್ಮ ಜೀವನ ಸಾಗುತ್ತದೆ. ನಮಗೆ ನೆನಪುಗಳಿಗಿಂತ ಮರೆವೇ ಜಾಸ್ತಿ. ಎಲ್ಲವನ್ನೂ ನೆನಪಿಟ್ಟಉಕೊಳ್ಳುವವರು ಮತ್ತು ಏನನ್ನೂ ಮರೆಯದೇ ಇರುವವರು ಯಾರು ಇಲ್ಲ,
ಕೆಲವರಿಗೆ ನೆನಪಿನ ಶಕ್ತಿ ಜಾಸ್ತಿ ಇದ್ದರೆ ಇನ್ನೂ ಕೆಲವರಿಗೆ ಮರೆಯುವಿಕೆಯೇ ಜಾಸ್ತಿ ಇರುತ್ತದೆ ಅಷ್ಟೇ.
ಹೆಚ್ಚಿನ ಸಂದರ್ಭಗಳಲ್ಲಿ ಮರೆವು ಅನ್ನುವ ನೆಪವೇ ನಮ್ಮ ನೆನಪಿಗೆ ಬರೋದು, ನಮ್ಮನು ನಾವು ರಕ್ಷಿಸಿಕೊಳ್ಳಲು ಅಥವಾ ಬೇರೆಯವರಿಂದ ತಪ್ಪಿಸಿಕೊಳ್ಳಲು ಮರೆವು ಎನ್ನುವ ನೆಪ ಒಡ್ಡುತ್ತೇವೆ. ನಾವು ಹೇಳೋ ಸುಳ್ಳು ನೆಪ ಮತ್ತೊಂದು ಸಲ ನಿಜ ಆಗಿ ಬಿಡುತ್ತದೆ. ಮುಖ್ಯವಾಗಿ ನಾವು ನೆನಪು ಇಟ್ಟುಕೊಳ್ಳಬೇಕಾದ ವಿಚಾರವನ್ನು ಮರೆತು ಬಿಡುತ್ತೇವೆ ಮತ್ತು ಬೇಡವಾದ ವಿಚಾರಗಳನ್ನು ಮರೆಯಲು ಪ್ರಯತ್ನಿಸಿದರು ಅದು ಸಾಧ್ಯವಾಗುವುದಿಲ್ಲ.
ಕೆಲವು ಸವಿ ನೆನಪುಗಳನ್ನು ನಾವು ಎಂದಿಗೂ ಮರೆಯಲು ಬಯಸುವುದಿಲ್ಲ, ಕಹಿ ನೆನಪುಗಳನ್ನು ನೆನಪಿಸಿಕೊಳ್ಳಲು ಬಯಸುದಿಲ್ಲ. ಕೆಲವೊಮ್ಮೆ
ಯಾವುದನ್ನು ಮರೆಯಬೇಕು ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅನ್ನುವುದೇ ಗೊಂದಲಮಯ ಆಗಿರುತ್ತದೆ.
ಪ್ರತಿ ದಿನ ಏನಾದರು ಒಂದು ವಿಷಯ ಮರಿಯುತ್ತೇವೆ ಒಂದೊಂದು ಸಲ ನಮ್ಮ ಸಣ್ಣ ಮರೆವಿನಿಂದ ಏನೇನೋ ಅವಾಂತರ ಆಗಿ ಬಿಡುತ್ತದೆ. ನಮ್ಮ ಸ್ನೇಹಿತರ ಜೊತೆ ಅಂತು ಮರೆವು ಅನ್ನೋ ನೆಪ ಯಾವಾಗ್ಲೂ ಇದ್ದಿದ್ದೆ! ಕ್ಷಮಿಸಿ ಅದು ಮರೆತು ಹೋದೆ ಅಂತ ಸಿಂಪಲ್ ಆಗಿ ಹೇಳಿದ್ರೆ ಆಯ್ತು ಆ ಒಂದು ಕ್ಷಣ ನಾವು ಬಚಾವ್ ಆದ ಹಾಗೆ.
ನಮಗೆ ಯಾವಾಗ ಬೇಕು ಆವಾಗ ಮರೆವು ಅಂತ ಹೇಳಿ ಅದರ ತಲೆ ಮೇಲೆ ಗೂಬೆ ಕೂರಿಸ್ತೀವಿ, ಮರೆವು ಸುಮ್ನೆ ಇರುತ್ತಾ ಸರಿಯಾದ ಸಮಯ ನೋಡಿ ನಮ್ಮ ತಲೆ ಓಡೆಯುತ್ತೆ. ಪರೀಕ್ಷೆಯ ಸಮಯದಲ್ಲಿ ನೋಡಿ ಅದರ ಆಟ ಶುರು ಮಾಡುತ್ತದೆ ನಾವು ತಲೆ ಚಚ್ಚಿಕೊಂಡರೂ ಓದಿದ್ದು ನೆನಪು ಆಗಲ್ಲ ಎಲ್ಲಾ ಮರೆತು ಹೋಗುತ್ತದೆ. ಅಷ್ಟು ಚೆನ್ನಾಗಿ ಓದಿದ್ದು ನೆನಪೇ ಆಗಲ್ಲ ಅದೇ ನೋಡಿ ಮರೆವು ಮತ್ತು ನೆನಪುಗಳು ನಮ್ಮ ಜೊತೆ ಆಡೋ ಆಟ!! ಇದು ಒಂದು ಉತ್ತಮ ಉದಾಹರಣೆ, ಹೀಗೆ ಬೇರೆ ಸಮಯದಲ್ಲಿಯೂ ಮರೆವು ಮಾಡೋ ಅವಾಂತರ ನಿಮಗೆ ತಿಳಿದೇ ಇದೆ!.
ನೆನಪು ಒಂದೇ ಇದ್ದಿದ್ರೆ ಹೇಗೆ? ನೋವು ಉಂಟು ಮಾಡುವ ನೆನಪುಗಳು ನಮ್ಮನು ಚುಚ್ಚಿ ಚುಚ್ಚಿ ಮನಸಿಗೆ ಹಿಂಸೆ ಮಾಡುತ್ತೆ ಹಾಗಂತ ನೆನಪುಗಳೇ ಇಲ್ಲದೇ ಎಲ್ಲವನ್ನೂ ಮರೆಯುವ ಹಾಗೆ ಇದ್ದರೆ ಹೇಗೆ? ಎಷ್ಟೊ ಒಳ್ಳೆಯ ಸವಿ ನೆನಪುಗಳನ್ನು ಮರೆಯುತ್ತಿದ್ದೆವು. ಮರೆವು ನೆನಪು ಅನ್ನೋದು ಒಳ್ಳೇದೇ ಆದರೆ ಎರಡೂ ಇತಿ ಮಿತಿಯಲ್ಲಿ ಇರಬೇಕು.
ನನಗೆ ನೆನಪಿಗಿಂತ ಮರೆವು ಜಾಸ್ತಿ ಅನ್ನೋದು ಈಗ ಖಚಿತ ಆಯ್ತು ಹೇಗೆ ಅಂತ ಕೇಳ್ತೀರಾ? ನಾನು ಹತ್ತು ನಿಮಿಷದ ಹಿಂದೆ ಮರೆವು ನೆನಪುಗಳ ಬಗ್ಗೆ ಹಾಗೆ ಬರೆಯಬೇಕು ಹೀಗೆ ಬರೆಯಬೇಕು ಅಂತ ಅಂದುಕೊಂಡಿದ್ದೆ ಈಗ ನೋಡಿದ್ರೆ ಅಂದುಕೊಂಡಿದ್ದೆಲ್ಲ ಮರೆತು ಹೋಗಿದೆ ㋡
Sunday, June 06, 2021
ಸ್ನೇಹಿತರು
ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತರು ವಹಿಸುವ ಪಾತ್ರ ತುಂಬಾ ಮುಖ್ಯವಾದದ್ದು. ಬಾಲ್ಯದ ದಿನಗಳಿಂದ ಬದುಕಿನ ಕೊನೆವರೆಗೂ ನಮ್ಮ ಜೊತೆ ಇರೋರು ಸ್ನೇಹಿತರು. ಅಚ್ಚುಮೆಚ್ಚಿನ ಸ್ನೇಹಿತರು, ಆತ್ಮೀಯ ಸ್ನೇಹಿತರು ಅಂತ ಬೇರೆ ಬೇರೆ ವರ್ಗ ಬೇರೆ ಇರುತ್ತೆ.
ಈ ಸ್ನೇಹ ಶುರುವಾಗೋದಕ್ಕೆ ನಿರ್ದಿಷ್ಟ ಕಾರಣ ಬೇಕಾಗಿಲ್ಲ , ಯಾರಿಗೆ ಯಾವ ರೀತಿಯಲ್ಲಿ ಸ್ನೇಹ ಬೆಳೆಯುತ್ತೆ ಅಂತ ಹೇಳೋಕೆ ಆಗಲ್ಲ.
ಕೆಲವೊಂದು ಸಂದರ್ಭದಲ್ಲಿ ನಮಗೆ ಕೆಲವರ ಜೊತೆ ಸ್ನೇಹ ಅನಿವಾರ್ಯ ಆಗಿರುತ್ತದೆ, ನಮ್ಮ ಸ್ವಾರ್ಥಕ್ಕಾಗಿ ಇರಬಹುದು , ಅವರಿಂದ ಆಗೋ ಸಹಾಯಕ್ಕಾಗಿ ಇರಬಹುದು.
ಪ್ರತಿಯೊಬ್ಬರಿಗೂ ಸ್ನೇಹಿತರು ಇದ್ದೇ ಇರುತ್ತಾರೆ, ವ್ಯಕ್ತಿ ರೂಪದಲ್ಲಿ ಇಲ್ಲವಾದರೂ ವಸ್ತುಗಳ ರೂಪದಲ್ಲಿಯಾದರು ಇರುತ್ತದೆ.ಉದಾಹರಣೆಗೆ ಅದು ಪುಸ್ತಕ ಆಗಿರಬಹುದು,ಮೊಬೈಲ್ ಆಗಿರಬಹುದು ಅಥವಾ ಬೇರೆ ಯಾವುದೋ ವಸ್ತು ಆಗಿರಬಹುದು.
ಯಾರೂ ಇಲ್ಲದೆ ಒಂಟಿಯಾಗಿ ಇರುತ್ತಿನಿ ಅಂತ ಹೇಳೋದು ಸುಲಭ, ಆದರೆ ನಮಗೆ ತಿಳಿಯದೆ ನಾವು ನಮ್ಮ ಆಲೋಚನೆ, ಕಲ್ಪನೆ, ಮನಸು, ಕನಸುಗಳ ಜೊತೆ ಸ್ನೇಹ ಬೆಳೆಸಿರುತ್ತೇವೆ! ಈಗ ಹೇಳಿ ನೀವು ಒಂಟಿಯಾ? ನಿಮಗೆ ಯಾರು ಸ್ನೇಹಿತರು ಇಲ್ವಾ? ನೀವೇ ಯೋಚನೆ ಮಾಡಿ!.
ಕೆಲವೊಮ್ಮೆ ಜೀವ ಇರೋ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸುವುದಕ್ಕಿಂತ ನಿರ್ಜೀವಿ ಆಗಿರೋ ವಸ್ತುಗಳ ಜೊತೆ ಅಥವಾ ಮುಗ್ಧ ಪ್ರಾಣಿ -ಪಕ್ಷಿಗಳ ಜೊತೆ ಸ್ನೇಹ ಬೆಳೆಸೋದು ಉತ್ತಮ ಯಾಕಂದ್ರೆ ಅವುಗಳು ನಮ್ಮ ಭಾವನೆಗಳಿಗೆ ಪ್ರತಿಕ್ರಿಯೆ ನೀಡದಿದ್ದರೂ ನಮ್ಮ ಭಾವನೆಗಳಿಗೆ ನೋವು ಉಂಟು ಮಾಡುವುದಿಲ್ಲ.
ಸ್ನೇಹ ಹೇಗೆ ಶುರುವಾಗಿದ್ದರು ಅದನ್ನು ನಾವು ಹೇಗೆ ಮುಂದುವರಿಸಿಕೊಂಡು ಹೋಗುತ್ತೇವೆ ಅನ್ನೋದು ಮುಖ್ಯ ಆಗಿರುತ್ತೆ.
ಮನೆಯಿಂದ ಆಚೆ ಬಂದಾಗ ನಮಗೆ ಸ್ನೇಹಿತರೇ ಎಲ್ಲ, ಅವರ ಜೊತೆ ಸಮಯ ಕಳೆಯೋದೆ ಒಂದು ರೀತಿ ಮಜಾ. ತಮ್ಮ ಸ್ವಂತ ನೋವನ್ನು ಮರೆತು ನಮ್ಮನು ನಗಿಸೋರು ತಾನೆ ನಿಜವಾದ ಸ್ನೇಹಿತರು.
ಹಾಗೆ ಸ್ವಲ್ಪ ಮುನಿಸು, ಜಗಳ , ಸ್ವಲ್ಪ ಅಸೂಯೆ, ನಂಬಿಕೆ , ಆರೈಕೆ, ಹಾರೈಕೆ, ಬೆಂಬಲ ಎಲ್ಲ ಸೇರಿದ್ರೆ ತಾನೆ ಆಗೋದು ಸ್ನೇಹ..
ಸ್ನೇಹ ಮತ್ತು ಸ್ನೇಹಿತರ ಬಗ್ಗೆ ಹೇಳೋಕೆ ತುಂಬಾ ಇದೆ ಆದ್ರೆ ನಾನ್ ಹೇಳೋದು ಇಷ್ಟೇ ಅಸಮಾಧಾನ, ಅಪನಂಬಿಕೆ , ಮೂರ್ಖತನದಿಂದ ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಕೆಲವೊಮ್ಮೆ ಕಾಲ ನಮ್ಮನ್ನು ಸ್ನೇಹಿತರಿಂದ ದೂರ ಮಾಡುತ್ತೆ ಆಗ ನಾವು ಸ್ನೇಹಿತರ ನೆನಪುಗಳನ್ನು ನೆನೆದು ಖುಷಿಯಾಗಿ ಇರಬೇಕು ಅಷ್ಟೇ..
Saturday, June 05, 2021
ಆಸೆ ಮತ್ತು ಚಿಂತೆ
-
ಕ್ರಷ್ ಅಂತೆ ಕ್ರಷ್! ಹೌದು ಎಲ್ಲರ ಲೈಫ್ ಅಲ್ಲಿ ಒಬ್ರು ಕ್ರಷ್ ಅಂತ ಇದ್ದೇ ಇರ್ತಾರೆ ಬಿಡಿ. ಆದ್ರೆ ನನ್ ಬೆಸ್ಟ್ ಫ್ರೆಂಡ್ ಇದ್ದಾಳೆ ಇವಳಿಗೆ ಇರೋ ಕ್ರಷ್ ಒಂದಲ್ಲ ಎರಡಲ್ಲ...
-
ಅಮ್ಮ ಎಂದರೆ ನನ್ನಮ್ಮ ನಿನಗಾರು ಸಾಟಿ ಇಲ್ಲಮ್ಮ ಪ್ರತಿ ಜನುಮದಲ್ಲು ನಾನೇ ನಿನ್ನ ಕಂದಮ್ಮ ಸಾವಿರ ಜನುಮಕು ನೀನಾಗಬೇಕು ನನ್ನ ಹೆತ್ತಮ್ಮ ನನಗಾಗಿ ನೀನೆಷ್ಟು ಶ್ರಮಿಸುವೆ ನನ...
-
ಅತ್ತು ಸೋತಿದೆ ಈ ಹೃದಯ ನಿನಗೆ ಇದರ ಅರಿವಿದೆಯಾ ಈ ನೋವಿಗೆ ಬೇಕಿದೆ ಸಾಂತ್ವಾನ ನೀ ನೀಡುವೆಯಾ ನಗುವಿನ ಆಹ್ವಾನ