Monday, June 14, 2021

ಹುಟ್ಟುಹಬ್ಬ


ಹುಟ್ಟುಹಬ್ಬ


ಪ್ರತಿಯೊಬ್ಬರು ಆಚರಿಸುವ ಹಬ್ಬ ಅಂದ್ರೆ ಅದು ಹುಟ್ಟುಹಬ್ಬ ! ಹಹಹ  ಹೌದು ಎಲ್ಲರಿಗೂ ಹುಟ್ಟುಹಬ್ಬ ಅಂದ್ರೆ ವಿಶೇಷ ಮತ್ತು ಅದನ್ನು ಎಲ್ಲರೂ ಆಚರಿಸುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ.
ಹುಟ್ಟುಹಬ್ಬ ಅಂದ್ರೆ ಏನೋ ಒಂತರ ಸಂತಸ, ಉಲ್ಲಾಸ, ಉತ್ಸಾಹ.
ನಮ್ಮ ಬಾಲ್ಯದಲ್ಲಿ ಹುಟ್ಟುಹಬ್ಬ ಅಂದ್ರೆ ಸಾಕು ಸಂಭ್ರಮವೇ ಸಂಭ್ರಮ. ಅಪ್ಪ ಅಮ್ಮ ಕೊಡಿಸೋ ಹೊಸ ಬಟ್ಟೆ, ಅಣ್ಣ ಅಕ್ಕ ಕೊಡಿಸೋ ಉಡುಗೊರೆಗಾಗಿ ನಾವು ಹಾತೊರೆಯುತ್ತಾ ಇದ್ದೆವು. ಶಾಲೆಗೆ ಹೊಸ ಬಟ್ಟೆ ಹಾಕಿಕೊಂಡು ಒಂದು ಬಾಕ್ಸ್ ಚಾಕೋಲೇಟ್ ಹಿಡಿದುಕೊಂಡು ತರಗತಿಗೆ ಹೋಗುತ್ತಿದ್ದ ಹಾಗೆ ಎಲ್ಲರಿಗೂ ತಿಳಿಯುತ್ತೆ ನಮ್ಮ ಹುಟ್ಟುಹಬ್ಬ ಅಂತ,ತರಗತಿಯ  ಎಲ್ಲರೂ ಸೇರಿ ಶುಭಾಶಯ ತಿಳಿಸುತ್ತಾರೆ.  ಯಾರದೋ ಹುಟ್ಟುಹಬ್ಬ ಅಂತ ಗೊತ್ತಾದ್ರೆ ಸಾಕು ನಮಗೆ ಚಾಕೋಲೇಟ್ ಸಿಗುತ್ತೆ ಅನ್ನೋ ಖುಷಿ. ಚಾಕೋಲೇಟ್ ಕೊಡಿಸೋದಕ್ಕೆ ಅಮ್ಮ ಅಪ್ಪನ ಪೀಡಿಸುತ್ತಿದ್ದೆವು. ನಾವು ಬೆಳೆದಂತೆ ನಾವು, ನಮ್ಮ ಸುತ್ತ ಮುತ್ತ ಎಲ್ಲವೂ ಬದಲಾಗುತ್ತದೆ ಅಲ್ವಾ. ಈಗೆಲ್ಲಾ ಹಾಗೆ ಸೇರಿ ವಿಶ್ ಮಾಡೋದು ಎಲ್ಲಿದೆ ಹೇಳಿ? ಈಗ  ನಾವು ವಿಶ್ ಮಾಡೋದು ವಾಟ್ಸಪ್, ಫೇಸ್ಬುಕ್ ಅಂತ ಸ್ಟೇಟಸ್ ಅಲ್ಲಿ ಅಲ್ವಾ!!?  ಕೆಲವರು ಅಂತೂ ಒಂದೇ ಮನೇಲಿ ಇದ್ರು ಕೂಡ ಬರಿ ವಾಟ್ಸಪ್ ಅಲ್ಲಿ  ವಿಶ್ ಮಾಡ್ತಾರೆ , ಬಾಯಿ ತುಂಬಾ ಮಾತಾಡಿ ವಿಶ್ ಮಾಡೋ ಸಮಾಧಾನ ಎಲ್ಲಿದೆ ಹೇಳಿ! 
ನಾವಿರುವ ತಾಣ ಯಾವುದು ಅಂದ್ರೆ ಸಾಮಾಜಿಕ ಜಾಲತಾಣ ಅನ್ನೋ ಮಟ್ಟಿಗೆ ನಮ್ಮ ಮನಸ್ಥಿತಿ ಬದಲಾಗಿದೆ!
ಬಾಲ್ಯದಲ್ಲಿ ನಮಗಿದ್ದ ಆ ಮುಗ್ಧತೆ, ಆ ಭಾವುಕತೆ ಈಗೆಲ್ಲಿದೆ ಎಲ್ಲವೂ ಬದಲಾಗಿದೆ ಅಷ್ಟೇ. ಆಗೆಲ್ಲ ಎಲ್ಲರಿಗೂ ವಿಶ್ ಮಾಡುತ್ತಾ ಇದ್ದೆವು ಈಗ ಹೇಗೆ ಅಂದ್ರೆ ಅವರು ನಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ರೆ ಮಾತ್ರ ನಾವು ವಿಶ್ ಮಾಡೋದು, ಇಲ್ಲ ಅಂದ್ರೆ ನಾವು ಯಾಕೆ ವಿಶ್ ಮಾಡ್ಬೇಕು ಅನ್ನೋದು ನಮ್ಮ ಮನಸ್ಥಿತಿ. ನೋಡಿ ಎಷ್ಟೊಂದು ಬದಲಾಗಿದೆ ಎಲ್ಲ ಅಂತ.

ಹುಟ್ಟುಹಬ್ಬಕ್ಕೆ ಮಧ್ಯರಾತ್ರಿ 12 ಗಂಟೆಗೆ ವಿಶ್ ಮಾಡೋದನ್ನ ಮೊದಲು ಯಾರು ಶುರು ಮಾಡಿದ್ದು ಅನ್ನೋದು ಗೊತ್ತಿಲ್ಲ ಆದ್ರೆ ಇದನ್ನು ತುಂಬಾ ಜನ ಅನುಸರಿಸುತ್ತಾರೆ. 12 ಗಂಟೆಗೆ ಎದ್ದು ವಿಶ್ ಮಾಡೋದು ಅದರಲ್ಲು ಮೊದಲು ಯಾರು ವಿಶ್ ಮಾಡುತ್ತಾರೋ ಅದೇ ಅವರ ಹುಟ್ಟುಹಬ್ಬಕ್ಕೆ ಮೊದಲ ವಿಶ್ ಅಂತೆ! ಅಲ್ಲ ಫಸ್ಟ್ ವಿಶ್ ಅನ್ನೋದು ನಿಜ ಆಗಿದ್ರೆ ಮೊದ್ಲು ಅಮ್ಮ ಅಪ್ಪ 12 ಗಂಟೆಗೆ ಎದ್ದು ವಿಶ್ ಮಾಡ್ತಿದ್ರು ಅಲ್ವಾ! ಅಮ್ಮ ಅಪ್ಪ ಪ್ರತಿ ದಿನ ನಮ್ಮ ಒಳಿತಿಗಾಗಿ  ಮನಸಲ್ಲಿ ವಿಶ್ ಮಾಡ್ತಾ ಇರ್ತಾರೆ ಅವರು ಅದನ್ನು ಬಾಯಿ ಬಿಟ್ಟು ಹೇಳುವುದಿಲ್ಲ ಅಷ್ಟೇ. ಫಸ್ಟ್ ವಿಶ್ ಅನ್ನೋದು ಏನೇ ಇದ್ರೂ ಅದು ಅಮ್ಮ ಅಪ್ಪ ಅವರದ್ದೇ ಆಗಿರುತ್ತೆ ಅವ್ರು ಹೇಳ್ಕೊಳ್ಳಿ ಹೇಳ್ದೆ ಇರ್ಲಿ.  12ಗಂಟೆ ಆಗ್ಲಿ ಯಾವುದೇ ಟೈಮ್ ಆಗಿರ್ಲಿ ಒಳ್ಳೆ ಮನಸಿಂದ ವಿಶ್ ಮಾಡೋದು ಮುಖ್ಯ ಅಷ್ಟೇ. 12 ಗಂಟೆಗೆ ವಿಶ್ ಮಾಡೋದು ತಪ್ಪು ಅಂತ ಹೇಳ್ತಿಲ್ಲ ಆದ್ರೆ 12 ಗಂಟೆಗೆ ವಿಶ್ ಮಾಡೋದು ಮಾತ್ರ ವಿಶೇಷ ಅಂತ ಭಾವಿಸೋದು ಸರಿ ಅಲ್ಲ ಅನ್ನೋದು ನನ್ನ ಅನಿಸಿಕೆ. ವಿಶ್ ಮಾಡೋದು ಮಾಡದೇ ಇರೋದು ಅವರವರಿಗೆ ಬಿಟ್ಟಿದ್ದು, ನಾವು  ಮನಸಿನಲ್ಲಿ ಶುಭ ಹಾರೈಸಿದರೆ ಅಷ್ಟೇ ಸಾಕು ಬೇರೆ ಯಾವ ವಿಶ್ ಬೇಕಾಗಿಲ್ಲ.

9 comments: