ನೋವು - ನಲಿವು, ಅಳು - ನಗು, ಕಷ್ಟ - ಸುಖ ಹೇಗೆ ನಮ್ಮ ಜೀವನದಲ್ಲಿ ಇರುತ್ತದೆಯೋ ಹಾಗೆಯೇ ಮರೆವು - ನೆನಪು ಕೂಡ ಇರುತ್ತದೆ. ಪ್ರತಿ ದಿನ ಮರೆವು ನೆನಪುಗಳೊಂದಿಗೆ ನಮ್ಮ ಜೀವನ ಸಾಗುತ್ತದೆ. ನಮಗೆ ನೆನಪುಗಳಿಗಿಂತ ಮರೆವೇ ಜಾಸ್ತಿ. ಎಲ್ಲವನ್ನೂ ನೆನಪಿಟ್ಟಉಕೊಳ್ಳುವವರು ಮತ್ತು ಏನನ್ನೂ ಮರೆಯದೇ ಇರುವವರು ಯಾರು ಇಲ್ಲ,
ಕೆಲವರಿಗೆ ನೆನಪಿನ ಶಕ್ತಿ ಜಾಸ್ತಿ ಇದ್ದರೆ ಇನ್ನೂ ಕೆಲವರಿಗೆ ಮರೆಯುವಿಕೆಯೇ ಜಾಸ್ತಿ ಇರುತ್ತದೆ ಅಷ್ಟೇ.
ಹೆಚ್ಚಿನ ಸಂದರ್ಭಗಳಲ್ಲಿ ಮರೆವು ಅನ್ನುವ ನೆಪವೇ ನಮ್ಮ ನೆನಪಿಗೆ ಬರೋದು, ನಮ್ಮನು ನಾವು ರಕ್ಷಿಸಿಕೊಳ್ಳಲು ಅಥವಾ ಬೇರೆಯವರಿಂದ ತಪ್ಪಿಸಿಕೊಳ್ಳಲು ಮರೆವು ಎನ್ನುವ ನೆಪ ಒಡ್ಡುತ್ತೇವೆ. ನಾವು ಹೇಳೋ ಸುಳ್ಳು ನೆಪ ಮತ್ತೊಂದು ಸಲ ನಿಜ ಆಗಿ ಬಿಡುತ್ತದೆ. ಮುಖ್ಯವಾಗಿ ನಾವು ನೆನಪು ಇಟ್ಟುಕೊಳ್ಳಬೇಕಾದ ವಿಚಾರವನ್ನು ಮರೆತು ಬಿಡುತ್ತೇವೆ ಮತ್ತು ಬೇಡವಾದ ವಿಚಾರಗಳನ್ನು ಮರೆಯಲು ಪ್ರಯತ್ನಿಸಿದರು ಅದು ಸಾಧ್ಯವಾಗುವುದಿಲ್ಲ.
ಕೆಲವು ಸವಿ ನೆನಪುಗಳನ್ನು ನಾವು ಎಂದಿಗೂ ಮರೆಯಲು ಬಯಸುವುದಿಲ್ಲ, ಕಹಿ ನೆನಪುಗಳನ್ನು ನೆನಪಿಸಿಕೊಳ್ಳಲು ಬಯಸುದಿಲ್ಲ. ಕೆಲವೊಮ್ಮೆ
ಯಾವುದನ್ನು ಮರೆಯಬೇಕು ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅನ್ನುವುದೇ ಗೊಂದಲಮಯ ಆಗಿರುತ್ತದೆ.
ಪ್ರತಿ ದಿನ ಏನಾದರು ಒಂದು ವಿಷಯ ಮರಿಯುತ್ತೇವೆ ಒಂದೊಂದು ಸಲ ನಮ್ಮ ಸಣ್ಣ ಮರೆವಿನಿಂದ ಏನೇನೋ ಅವಾಂತರ ಆಗಿ ಬಿಡುತ್ತದೆ. ನಮ್ಮ ಸ್ನೇಹಿತರ ಜೊತೆ ಅಂತು ಮರೆವು ಅನ್ನೋ ನೆಪ ಯಾವಾಗ್ಲೂ ಇದ್ದಿದ್ದೆ! ಕ್ಷಮಿಸಿ ಅದು ಮರೆತು ಹೋದೆ ಅಂತ ಸಿಂಪಲ್ ಆಗಿ ಹೇಳಿದ್ರೆ ಆಯ್ತು ಆ ಒಂದು ಕ್ಷಣ ನಾವು ಬಚಾವ್ ಆದ ಹಾಗೆ.
ನಮಗೆ ಯಾವಾಗ ಬೇಕು ಆವಾಗ ಮರೆವು ಅಂತ ಹೇಳಿ ಅದರ ತಲೆ ಮೇಲೆ ಗೂಬೆ ಕೂರಿಸ್ತೀವಿ, ಮರೆವು ಸುಮ್ನೆ ಇರುತ್ತಾ ಸರಿಯಾದ ಸಮಯ ನೋಡಿ ನಮ್ಮ ತಲೆ ಓಡೆಯುತ್ತೆ. ಪರೀಕ್ಷೆಯ ಸಮಯದಲ್ಲಿ ನೋಡಿ ಅದರ ಆಟ ಶುರು ಮಾಡುತ್ತದೆ ನಾವು ತಲೆ ಚಚ್ಚಿಕೊಂಡರೂ ಓದಿದ್ದು ನೆನಪು ಆಗಲ್ಲ ಎಲ್ಲಾ ಮರೆತು ಹೋಗುತ್ತದೆ. ಅಷ್ಟು ಚೆನ್ನಾಗಿ ಓದಿದ್ದು ನೆನಪೇ ಆಗಲ್ಲ ಅದೇ ನೋಡಿ ಮರೆವು ಮತ್ತು ನೆನಪುಗಳು ನಮ್ಮ ಜೊತೆ ಆಡೋ ಆಟ!! ಇದು ಒಂದು ಉತ್ತಮ ಉದಾಹರಣೆ, ಹೀಗೆ ಬೇರೆ ಸಮಯದಲ್ಲಿಯೂ ಮರೆವು ಮಾಡೋ ಅವಾಂತರ ನಿಮಗೆ ತಿಳಿದೇ ಇದೆ!.
ನೆನಪು ಒಂದೇ ಇದ್ದಿದ್ರೆ ಹೇಗೆ? ನೋವು ಉಂಟು ಮಾಡುವ ನೆನಪುಗಳು ನಮ್ಮನು ಚುಚ್ಚಿ ಚುಚ್ಚಿ ಮನಸಿಗೆ ಹಿಂಸೆ ಮಾಡುತ್ತೆ ಹಾಗಂತ ನೆನಪುಗಳೇ ಇಲ್ಲದೇ ಎಲ್ಲವನ್ನೂ ಮರೆಯುವ ಹಾಗೆ ಇದ್ದರೆ ಹೇಗೆ? ಎಷ್ಟೊ ಒಳ್ಳೆಯ ಸವಿ ನೆನಪುಗಳನ್ನು ಮರೆಯುತ್ತಿದ್ದೆವು. ಮರೆವು ನೆನಪು ಅನ್ನೋದು ಒಳ್ಳೇದೇ ಆದರೆ ಎರಡೂ ಇತಿ ಮಿತಿಯಲ್ಲಿ ಇರಬೇಕು.
ನನಗೆ ನೆನಪಿಗಿಂತ ಮರೆವು ಜಾಸ್ತಿ ಅನ್ನೋದು ಈಗ ಖಚಿತ ಆಯ್ತು ಹೇಗೆ ಅಂತ ಕೇಳ್ತೀರಾ? ನಾನು ಹತ್ತು ನಿಮಿಷದ ಹಿಂದೆ ಮರೆವು ನೆನಪುಗಳ ಬಗ್ಗೆ ಹಾಗೆ ಬರೆಯಬೇಕು ಹೀಗೆ ಬರೆಯಬೇಕು ಅಂತ ಅಂದುಕೊಂಡಿದ್ದೆ ಈಗ ನೋಡಿದ್ರೆ ಅಂದುಕೊಂಡಿದ್ದೆಲ್ಲ ಮರೆತು ಹೋಗಿದೆ ㋡
Super ❤️📝
ReplyDeleteThank you☺
Delete👌👌👌
ReplyDelete👌💯❤️
ReplyDeleteThanks☺❤
DeleteNice one❤️
ReplyDeleteThank you ❤
Delete