Sunday, June 06, 2021

ಸ್ನೇಹಿತರು

 

ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತರು ವಹಿಸುವ ಪಾತ್ರ ತುಂಬಾ ಮುಖ್ಯವಾದದ್ದು. ಬಾಲ್ಯದ ದಿನಗಳಿಂದ ಬದುಕಿನ ಕೊನೆವರೆಗೂ ನಮ್ಮ ಜೊತೆ ಇರೋರು ಸ್ನೇಹಿತರು.  ಅಚ್ಚುಮೆಚ್ಚಿನ ಸ್ನೇಹಿತರು, ಆತ್ಮೀಯ ಸ್ನೇಹಿತರು ಅಂತ ಬೇರೆ ಬೇರೆ ವರ್ಗ ಬೇರೆ ಇರುತ್ತೆ.
ಈ ಸ್ನೇಹ ಶುರುವಾಗೋದಕ್ಕೆ ನಿರ್ದಿಷ್ಟ ಕಾರಣ ಬೇಕಾಗಿಲ್ಲ , ಯಾರಿಗೆ ಯಾವ ರೀತಿಯಲ್ಲಿ ಸ್ನೇಹ ಬೆಳೆಯುತ್ತೆ ಅಂತ ಹೇಳೋಕೆ ಆಗಲ್ಲ.

ಕೆಲವೊಂದು ಸಂದರ್ಭದಲ್ಲಿ ನಮಗೆ ಕೆಲವರ ಜೊತೆ ಸ್ನೇಹ ಅನಿವಾರ್ಯ ಆಗಿರುತ್ತದೆ, ನಮ್ಮ ಸ್ವಾರ್ಥಕ್ಕಾಗಿ ಇರಬಹುದು , ಅವರಿಂದ  ಆಗೋ ಸಹಾಯಕ್ಕಾಗಿ ಇರಬಹುದು.

ಪ್ರತಿಯೊಬ್ಬರಿಗೂ ಸ್ನೇಹಿತರು ಇದ್ದೇ ಇರುತ್ತಾರೆ, ವ್ಯಕ್ತಿ ರೂಪದಲ್ಲಿ ಇಲ್ಲವಾದರೂ ವಸ್ತುಗಳ ರೂಪದಲ್ಲಿಯಾದರು ಇರುತ್ತದೆ.ಉದಾಹರಣೆಗೆ ಅದು ಪುಸ್ತಕ ಆಗಿರಬಹುದು,ಮೊಬೈಲ್ ಆಗಿರಬಹುದು ಅಥವಾ ಬೇರೆ ಯಾವುದೋ ವಸ್ತು ಆಗಿರಬಹುದು.
ಯಾರೂ ಇಲ್ಲದೆ ಒಂಟಿಯಾಗಿ ಇರುತ್ತಿನಿ ಅಂತ ಹೇಳೋದು ಸುಲಭ, ಆದರೆ ನಮಗೆ ತಿಳಿಯದೆ ನಾವು ನಮ್ಮ ಆಲೋಚನೆ, ಕಲ್ಪನೆ, ಮನಸು, ಕನಸುಗಳ ಜೊತೆ ಸ್ನೇಹ ಬೆಳೆಸಿರುತ್ತೇವೆ! ಈಗ ಹೇಳಿ ನೀವು ಒಂಟಿಯಾ? ನಿಮಗೆ ಯಾರು ಸ್ನೇಹಿತರು ಇಲ್ವಾ? ನೀವೇ ಯೋಚನೆ ಮಾಡಿ!.

ಕೆಲವೊಮ್ಮೆ ಜೀವ ಇರೋ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸುವುದಕ್ಕಿಂತ ನಿರ್ಜೀವಿ ಆಗಿರೋ ವಸ್ತುಗಳ ಜೊತೆ ಅಥವಾ ಮುಗ್ಧ ಪ್ರಾಣಿ -ಪಕ್ಷಿಗಳ ಜೊತೆ ಸ್ನೇಹ ಬೆಳೆಸೋದು ಉತ್ತಮ ಯಾಕಂದ್ರೆ ಅವುಗಳು ನಮ್ಮ ಭಾವನೆಗಳಿಗೆ ಪ್ರತಿಕ್ರಿಯೆ ನೀಡದಿದ್ದರೂ ನಮ್ಮ ಭಾವನೆಗಳಿಗೆ ನೋವು ಉಂಟು ಮಾಡುವುದಿಲ್ಲ.
ಸ್ನೇಹ ಹೇಗೆ ಶುರುವಾಗಿದ್ದರು ಅದನ್ನು ನಾವು ಹೇಗೆ ಮುಂದುವರಿಸಿಕೊಂಡು ಹೋಗುತ್ತೇವೆ ಅನ್ನೋದು ಮುಖ್ಯ ಆಗಿರುತ್ತೆ. 
ಮನೆಯಿಂದ ಆಚೆ ಬಂದಾಗ ನಮಗೆ ಸ್ನೇಹಿತರೇ ಎಲ್ಲ, ಅವರ ಜೊತೆ ಸಮಯ ಕಳೆಯೋದೆ ಒಂದು ರೀತಿ ಮಜಾ. ತಮ್ಮ ಸ್ವಂತ ನೋವನ್ನು ಮರೆತು ನಮ್ಮನು ನಗಿಸೋರು ತಾನೆ ನಿಜವಾದ ಸ್ನೇಹಿತರು.
ಹಾಗೆ  ಸ್ವಲ್ಪ ಮುನಿಸು, ಜಗಳ , ಸ್ವಲ್ಪ ಅಸೂಯೆ,  ನಂಬಿಕೆ , ಆರೈಕೆ, ಹಾರೈಕೆ, ಬೆಂಬಲ ಎಲ್ಲ ಸೇರಿದ್ರೆ ತಾನೆ ಆಗೋದು ಸ್ನೇಹ..

ಸ್ನೇಹ ಮತ್ತು ಸ್ನೇಹಿತರ ಬಗ್ಗೆ ಹೇಳೋಕೆ ತುಂಬಾ ಇದೆ ಆದ್ರೆ ನಾನ್ ಹೇಳೋದು ಇಷ್ಟೇ  ಅಸಮಾಧಾನ,  ಅಪನಂಬಿಕೆ , ಮೂರ್ಖತನದಿಂದ ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಕೆಲವೊಮ್ಮೆ ಕಾಲ ನಮ್ಮನ್ನು ಸ್ನೇಹಿತರಿಂದ ದೂರ ಮಾಡುತ್ತೆ ಆಗ ನಾವು ಸ್ನೇಹಿತರ ನೆನಪುಗಳನ್ನು ನೆನೆದು ಖುಷಿಯಾಗಿ ಇರಬೇಕು ಅಷ್ಟೇ..

7 comments: