ಹೆಸರು
ಪ್ರತಿಯೊಂದು ಜೀವಿಗಳಿಗೆ ಮತ್ತು ನಿರ್ಜೀವ ವಸ್ತುಗಳಿಗೆ ಹೆಸರು ಇದೆ. ನಮ್ಮ ಹೆಸರಿನಿಂದ ನಮಗೊಂದು ಗುರುತು. ಪ್ರತಿಯೊಬ್ಬರಿಗೂ ಅವರದೇ ಆದ ಹೆಸರು ಇರುತ್ತದೆ ಮತ್ತು ಅದು ವಿಭಿನ್ನವಾಗಿ ಇರುತ್ತದೆ.
ನಮಗೆ ಹೆಸರೇ ಇಲ್ಲದೆ ಹೋಗಿದ್ದರೆ ಹೇಗಿರುತ್ತಿತ್ತು ? ನಮ್ಮನ್ನು ನಾವು ಹೇಗೆ ಗುರುತಿಸಿಕೊಳ್ಳುತ್ತಿದ್ದೆವು? ಊಹಿಸಲು ಸಾಧ್ಯವಿಲ್ಲ ಅಲ್ವಾ!
ನಮಗೆ ಹೆಸರು ತುಂಬಾನೇ ಮುಖ್ಯ. ನಮ್ಮ ತಂದೆ ತಾಯಿ ನಮಗೆ ಅಚ್ಚುಕಟ್ಟಾದ ಮತ್ತು ಅರ್ಥಪೂರ್ಣವಾದ ಹೆಸರಿಂದ ನಾಮಕರಣ ಮಾಡುತ್ತಾರೆ. ಪ್ರತಿ ಹೆಸರಿಗೂ ಒಂದು ಅರ್ಥ ಇದೆ, ಅಂತಹ ಹೆಸರನ್ನೇ ತಂದೆ ತಾಯಿ ಹಿರಿಯರು ನಮಗೆ ಇಟ್ಟಿರುತ್ತಾರೆ.
ಅದೆಷ್ಟೋ ಜನರಿಗೆ ತಮ್ಮಹೆಸರಿನ ಅರ್ಥವೇ ತಿಳಿದಿರುವುದಿಲ್ಲ , ಅದೆಷ್ಟೋ ಜನರಿಗೆ ಅವರ ಹೆಸರಿನಲ್ಲಿ ಸಮಾಧಾನ , ಖುಷಿ ಇರುವುದಿಲ್ಲ. ಒಂದು ಬಾರಿ ನಿಮ್ಮ ಹೆಸರಿನ ಅರ್ಥ ತಿಳಿದುಕೊಳ್ಳಿ, ಅದೆಷ್ಟು ಚೆನ್ನಾಗಿದೆ ಎಂದು ತಿಳಿದುಕೊಳ್ಳಿ ಆಗ ನಿಮಗೆ ನಿಮ್ಮ ಹೆಸರು ಇಷ್ಟ ಆಗುತ್ತೆ!
ಒಂದೊಂದು ಸಲ ನನಗೂ ಅನಿಸುತ್ತೆ ನನ್ನ ಹೆಸರು ಚೆನ್ನಾಗಿಲ್ಲ ನನಗೆ ಬೇರೆ ಹೆಸರು ಬೇಕು ಅಂತಾ ಆದರೆ ಮರು ಕ್ಷಣವೇ ಅನಿಸುತ್ತೆ ಇಲ್ಲ ನನ್ನ ಹೆಸರು ಬೇರೆ ಎಲ್ಲ ಹೆಸರಿಗಿಂತ ಚೆನ್ನಾಗಿದೆ ಅಂತ.
ಈಗಿನ ಕೆಲವು ಹೆಸರುಗಳು ಏನೋ ವಿಚಿತ್ರ ಅನ್ಸುತ್ತೆ ಅದಕ್ಕೆ ಅರ್ಥ ಹೇಗು ಇರೋದಿಲ್ಲ, ಅರ್ಥ ಬಿಡಿ ಅದನ್ನ ಉಚ್ಚರಿಸೋದಕ್ಕು ಆಗಲ್ಲ ಆ ರೀತಿ ಇರುತ್ತೆ ಕೆಲವು ಹೆಸರುಗಳು.
ಹೆಸರಲ್ಲಿ ಏನಿಲ್ಲ ಅಂದ್ರು ಅದಕ್ಕೊಂದು ಅರ್ಥ ಇರ್ಬೇಕು ಅಲ್ವಾ...
No comments:
Post a Comment