Saturday, June 05, 2021

ಆಸೆ ಮತ್ತು ಚಿಂತೆ

ಆಸೆ ಮತ್ತು ಚಿಂತೆ

ಪ್ರತಿಯೊಂದು ಜೀವಿಗೂ ಆಸೆಗಳಿರುತ್ತೆ ಹಾಗೆಯೇ ಚಿಂತೆಯೂ ಇರುತ್ತೆ. ನಮ್ಮ ಆಸೆ ಮತ್ತು ಚಿಂತೆ  ಏರಡಕ್ಕು ಮಿತಿಯೇ ಇರಲ್ಲ! ನಮ್ಮ ಅತಿಯಾದ ಆಸೆಯಿಂದ ಒಮ್ಮೊಮ್ಮೆ ಚಿಂತೆ ಶುರು ಆಗುತ್ತೆ ಹಾಗೇ ಒಮ್ಮೊಮ್ಮೆ ನಮ್ಮ ಚಿಂತೆಗಳಿಂದಲೇ ನಮ್ಮ ಆಸೆಗಳು ಈಡೇರದೆ ಹೋಗುತ್ತೆ. ನಾವು ಆಸೆಗಳ ಬೆನ್ನೇರಿ ಹೋಗುತ್ತೇವೆ  ಚಿಂತೆ ಅನ್ನೋದು ನಮ್ಮ ಬೆನ್ನೇರಿ ಬರುತ್ತೆ, ನಾವು ಆಸೆ ಪಡೋದನ್ನ ಬಿಡೋದಿಲ್ಲ ಚಿಂತೆ ನಮ್ಮನ್ನು ಬಿಡಲ್ಲ. ಆಸೆ ಪಟ್ಟಿದ್ದು ಸಿಕ್ಕಾಗ ಆಗೋ ಖುಷಿಗಿಂತ ಅದು ಸಿಗದೇ ಹೋದಾಗ, ಅಥವಾ ನೆರವೇರದೇ ಹೋದಾಗ ಅಗೋ ಚಿಂತೆ, ನೋವು ಹೆಚ್ಚಾಗಿರುತ್ತದೆ.. 
ಅಸೆ ಪಡೋದು ತಪ್ಪಲ್ಲ ಆಸೆ ಪಡದೇ ಇರೋದಕ್ಕು ಆಗಲ್ಲ. ನಾವು ಚಿಂತೆ ಮಾಡೋದು ಬಿಟ್ರು ಚಿಂತೆ ನಮ್ಮನ್ನ ಸುಲಭವಾಗಿ ಬಿಡಲ್ಲ .. ಅದೇನೇ ಇರಲಿ ಆಸೆ- ದುರಾಸೆ ಚಿಂತೆ -ಕಂತೆಗಳ ಪೈಪೋಟಿಯಲ್ಲಿ ವಾಸ್ತವತೆಯ ಅರಿವು ನಮಗಿರಬೇಕು ಅಷ್ಟೇ ಯಾಕಂದ್ರೆ ಏನೇ ಇದ್ದರೂ ಕೊನೆಗೆ ನಾವು ವಾಸ್ತವತೆಯನ್ನು ಒಪ್ಪಲೇಬೇಕು , ಎಲ್ಲವೂ ತಪ್ಪಾಗಿದ್ರು ಸರಿ ಆಗಿರೋದು ವಾಸ್ತವತೆ ಮಾತ್ರ!!

7 comments: