Tuesday, June 08, 2021

ನಿದಿರೆ

ನಿನ್ನೆ ರಾತ್ರಿ ನಾನು ನಿದ್ದೆಗಿಂತ ಉತ್ತಮಾಗಿ ಇರೋದು, ನಿದ್ದೆಯಷ್ಟು ಸಮಾಧಾನ ತರಿಸೋದು ಬೇರೆ ಯಾವುದು ಇದೆ ಅಂತ ಯೋಚನೆ ಮಾಡ್ತಿದ್ದೆ. ಏರಡು ನಿಮಿಷ ಯೋಚಿಸಿದೆ ಅಷ್ಟೆ! ಆಮೇಲೆ ಕೇಳಿ ಏನ್ ಆಯ್ತು ಅಂದ್ರೆ ಹಾಗೆ ನಿದ್ದೆ ಬಂದುಬಿಟ್ಟಿದೆ. ನಿದ್ದೆ ಬಿಟ್ಟು ಬೇರೆಯದರ ಬಗ್ಗೆ ಯೋಚನೆ ಮಾಡೋದಕ್ಕೆ ನಿದ್ದೆ ಬಿಡಲಿಲ್ಲ .. ನಂಗಂತೂ ನಿದ್ದೆಗಿಂತ ಸಮಾಧಾನ ತರಿಸೋದು ಬೇರೆ ಏನೂ ಇಲ್ಲ ಅಂತ ಅನ್ಸುತ್ತೆ. ಇಡೀ ದಿನ ತಿನ್ನುತ್ತ ಕೂರೋದಕ್ಕೆ ಆಗತ್ತಾ? ಆಗ್ಬೋದು! ಆದ್ರೆ ಒಂದಿನ ಆಗ್ಬೋದು ಅಷ್ಟೇ. ದಿನ ಇಡೀ ಕೆಲ್ಸ ಮಾಡೋದಕ್ಕೆ ಆಗತ್ತಾ? ಸುಸ್ತು ಆಗತ್ತೆ ಅಷ್ಟೇ. ಯಾವುದೇ ವಿಷಯ ಅಥವಾ ಕೆಲಸವನ್ನು ನಿರಂತರವಾಗಿ ಮಾಡ್ತಾ ಇದ್ರೆ ನಮಗೆ ಅದು ಬೋರ್ ಅನ್ಸತ್ತೆ ಅಲ್ವಾ!? ಅದೇ ನಿದ್ದೆ ಮಾಡ್ತಾ ಇದ್ರೆ ಬೋರ್ ಅನ್ಸತ್ತ? ಬೋರ್ ಆಗ್ತಿದೆ ಅಂತ ಮಲಗೋರನ್ನ ನೋಡಿದ್ದೀನಿ, ಮಲಗಿ ಮಲಗಿ ಬೋರ್ ಆಗತ್ತೆ ಅಂತ ಹೇಳೋರನ್ನ ನಾನ್ ನೋಡಿದ್ದೀನಿ ಆದ್ರೆ ಅವ್ರು ಹೇಳೋದು ಅಷ್ಟೇ, ಬೋರ್ ಆದ್ರೂ ಅವ್ರು ಮತ್ತೆ ಮಾಡೋದು ನಿದ್ದೆನೇ.. ನೋಡಿ ನೀವು ನಿದ್ದೇನ ಇಷ್ಟ ಪಟ್ರು ಇಷ್ಟ ಪಡದೇ ಹೋದ್ರು ನಿದ್ದೆ ಮಾತ್ರ ನಿಮ್ಮನ್ನು ಇಷ್ಟ ಪಡುತ್ತೆ. ನಿದ್ದೆ ನಿಮ್ಮನ್ನ ದ್ವೇಷಿಸಿ ನಿಮಗೆ ನಿದ್ದೆ ಬಾರದೆ ಇದ್ರೆ ಅದು ನಿಮ್ದೆ ತಪ್ಪು ಅಷ್ಟೆ, ನೀವೇ ಏನೇನೋ ಯೋಚನೆ ಮಾಡಿ ನಿದ್ದೆ ಕೆಡಿಸಿಕೊಂಡಿರ್ತಿರ!
ಇಡೀ ದಿನ ಎಷ್ಟೇ ಖುಷಿ ಆಗಿರಿ ಅಥವಾ ಬೇಜಾರ್ ಆಗಿರಿ, ದಿನ ಮುಗಿಸಿ ರಾತ್ರಿ ಮಾಡೋ ಆ ನಿದ್ದೆಯಲ್ಲಿ ಏನೋ ಖುಷಿ ಇದೆ ಸಮಾಧಾನ ಇದೆ. ಚೆನ್ನಾಗಿರೋ ಕನಸು ಬಿದ್ದಿಲ್ಲ ಅಂದ್ರು ಚೆನ್ನಾಗಿ ನಿದ್ದೆ ಬಂದ್ರೆ ಸಾಕು.
ಕೆಲವೊಂದು ಸಲ ನಮಗೆ ನಿದ್ದೆಯಲ್ಲಿ ಕೆಟ್ಟ ಕನಸು ಅಥವಾ ಗಾಬರಿ ಆಗೋ ಕನಸು ಬೀಳುತ್ತೆ ಹಾಗೆ ಒಳ್ಳೆ ಕನಸುಗಳು ಬೀಳುತ್ತೆ ಕನಸು ಯಾವುದೇ ಇರಲಿ ನಾವು ಬೆಳಗ್ಗೆ ಎದ್ದ ತಕ್ಷಣ ಎಲ್ಲ ಮರಿತೇವೆ ಅಲ್ವಾ?  
ಒಂದೊಂದು ಸಲ ಈ ನಿದ್ದೇಲಿ ಕಾಣೋ ಕನಸಲ್ಲೇ ನಾವು ತುಂಬಾ ಖುಶಿಯಾಗಿ ಇರ್ತೀವಿ ನಮ್ ಬದುಕಿಗಿಂತ ಕನಸೇ ಎಷ್ಟೋ ವಾಸಿ ಅಂತ ಅನ್ಸುತ್ತೆ. ಒಂದ್ ಸಲ ನೆನ್ಸ್ಕೊಳಿ ನಿಮಗೆ ಎಷ್ಟು ಸಲ ಅನ್ಸಿಲ್ಲ ಅಯ್ಯೋ ಈ ಕನಸು ನಿಜ ಆಗಬಾರದಿತ್ತ ಅಂತ! 
ಮೂರು ಹೊತ್ತು ಚೆನ್ನಾಗಿ ಊಟ ಎಲ್ಲ ಮರೆತು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ , ಆಮೇಲೆ ನಾನು ಹೀಗೆಲ್ಲಾ ಹೇಳ್ದೆ ಅಂತ ಇರೋ ಬರೋ ಕೆಲ್ಸ ಬಿಟ್ಟು ಮೂರು ಹೊತ್ತು ಮಲ್ಗಕ್ ಹೋಗ್ಬೇಡಿ ಆಯ್ತಾ ನಿಮಗೆ ದೊರೆತಿರುವ ಅಮೂಲ್ಯವಾದ ಸಮಯವನ್ನು ಸರಿಯಾಗಿ ವಿನಿಯೋಗಿಸಿ ಹಾಗೂ ಪ್ರತಿ ಕ್ಷಣವನ್ನೂ ಆನಂದಿಸಿ..
ನಿದ್ದೆ ಬಗ್ಗೆ ಜಾಸ್ತಿ ಹೇಳಕ್ ಹೋದ್ರೆ ನನ್ಗೆ ನಿದ್ದೆ ಬರತ್ತೆ ಅಷ್ಟೇ. ನಾನು ಜಾಸ್ತಿ ಹೇಳ್ಬೇಕು ಅಂತ ಇಲ್ಲ ನಿಮ್ಗೆ ಗೊತ್ತು ಇದೆಲ್ಲ. ಏನೋ ನನ್ಗೆ ಅನ್ಸಿದ್ದನ್ನು ನಿಮ್ಗೆ ಹೇಳ್ದೆ ಅಷ್ಟೇ.





6 comments: