ಮಳೆಯು ಇರಲಿ ಜೊತೆಗೆ ಛತ್ರಿನು ಇರಲಿ
ನಮಗೆ ಹೇಗೆ ಮೂಡ್ ಸ್ವಿಂಗ್ಸ್ ಇರುತ್ತೋ ಹಾಗೆಯೇ ಪ್ರಕೃತಿಗೆ ಮೂಡ್ ಸ್ವಿಂಗ್ಸ್ ಇರತ್ತೆ ಅಂತ ಅನ್ಸತ್ತೆ. ಅದು ಯಾವಾಗ ಹೇಗೆ ಇರುತ್ತೆ, ಯಾವಾಗ ಬಿಸಿಲು, ಯಾವಾಗ ಮಳೆ, ಚಳಿ ಯಾವಾಗ ಏನ್ ಆಗತ್ತೆ ಅಂತ ಹೇಳೋದಕ್ಕೆ ಆಗಲ್ಲ. ಬೇಸಿಗೆ ಕಾಲದಲ್ಲಿ ಒಂದೊಂದು ಸಲ ಮಳೆ ಬರುತ್ತೆ, ಒಂದೊಂದ್ ಸಲ ಮಳೆಗಾಲದಲ್ಲಿ ಜೋರು ಸೆಕೆ ಇರುತ್ತೆ. ಈ ಮಳೆ ಯಾವಾಗ ಬರುತ್ತೆ ಅಂತ ಹೇಳಕ್ಕೆ ಆಗಲ್ಲ. ಅದಕ್ಕೆ ಮಳೆಗಾಲ ಶುರು ಆಗುತ್ತಿದ್ದ ಹಾಗೆ ಅಮ್ಮ ದಿನ ಹೇಳೋ ಮಾತು ಒಂದೆ ಮಳೆಯಲ್ಲಿ ಸುಮ್ಮ್ ಸುಮ್ನೆ ನೆನೆಯಬೇಡ ಜ್ವರ ಬರುತ್ತೆ ನೆಗಡಿ ಆಗುತ್ತೆ,ಛತ್ರಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡ ಅಂತ. ಅಮ್ಮ ಏನೋ ಪ್ರೀತಿ ಕಾಳಜಿಯಿಂದ ದಿನ ಹೇಳ್ತಾರೆ ಆದ್ರೆ ನಮ್ಮ ಕಿವಿಗೆ ಇದೆಲ್ಲ ಎಲ್ಲಿ ತಾನೆ ಕೇಳಿಸುತ್ತೆ ನಾವು ನಮ್ಮದೇ ಲೋಕದಲ್ಲಿ ಮುಳುಗಿರುತ್ತೇವೆ.
ಅಮ್ಮ ಹೇಳಿದ್ದು ಸರೀನೇ ಅದಕ್ಕೆ ನಾನು ಬ್ಯಾಗ್ ನಲ್ಲಿ ಛತ್ರಿ ತಪ್ಪಿಸುತ್ತಾ ಇರಲ್ಲಿಲ್ಲ. ಮಳೆ ಬಂದರೂ ಇಲ್ಲದೇ ಇದ್ದರೂ ಛತ್ರಿ ನನ್ನ ಬ್ಯಾಗ್ ಅಲ್ಲಿಯೇ ಇರುತ್ತಿತ್ತು.
ಹೀಗೆ ಒಂದು ದಿನ ಕಾಲೇಜಿಗೆ ಹೊರಡುವಾಗ ಅದ್ಯಾವುದೋ ಕಾರಣಕ್ಕೆ ಛತ್ರಿಯನ್ನು ಬ್ಯಾಗಿನಿಂದ ಹೊರಗೆ ತೆಗೆದಿದ್ದೆ ಬಸ್ಸ್ ಮಿಸ್ಸ್ ಆಗುತ್ತೆ ಅಂತ ಆತುರದಲ್ಲಿ ಇದ್ದ ಕಾರಣ ಛತ್ರಿಯ ನೆನಪೇ ಆಗಲಿಲ್ಲ ಅದನ್ನು ಮನೆಯಲ್ಲಿಯೇ ಮರೆತು ಹೋಗಿದ್ದೆ. ಮನೆ ಬಿಟ್ಟು ಸ್ವಲ್ಪ ದೂರ ಹೋಗಿದ್ದೆ ಅಷ್ಟೇ ಟ್ರಿಣ್ ಟ್ರಿಣ್ ಅಂತ ಫೋನ್ ರಿಂಗ್ ಆಯಿತು ಯಾರು ಅಂತ ನೋಡಿದ್ರೆ ಅಮ್ಮ , ಯಾಕಮ್ಮ ಏನ್ ಆಯ್ತು ಬೇಗ ಹೇಳು ನನಗೆ ಲೇಟ್ ಆಗ್ತಾ ಇದೆ ಬಸ್ಸ್ ಮಿಸ್ ಆಗುತ್ತೆ ಅಂತ ಹೇಳಿದೆ. ನೀನು ಛತ್ರಿ ಮರೆತು ಹೋಗಿದ್ದೀಯ ವಾಪಸ್ ಬಂದು ತೆಗೆದುಕೊಂಡು ಹೋಗು ಮಳೆ ಬಂದ್ರೆ ಒದ್ದೆ ಆಗ್ತಿಯ ಅಂದ್ರು. ನನಗೆ ಲೇಟ್ ಬೇರೆ ಆಗಿತ್ತು ಸುತ್ತ ನೋಡಿದ್ರೆ ಬಿಸಿಲು ಇತ್ತು ಮಳೆ ಬರುವ ಯಾವ ಸೂಚನೆಯೂ ಇರಲಿಲ್ಲ, ಅದಕ್ಕೆ ಪರ್ವಾಗಿಲ್ಲ ಅಮ್ಮ ಮಳೆ ಬರಲ್ಲ ನಾನು ಹೋಗ್ತೀನಿ ಲೇಟ್ ಆಗ್ತಿದೆ ಅಂತ ಹೇಳಿ ಹೊರಟು ಹೋದೆ.
ಆವತ್ತು ಇಡೀ ದಿನ ಬಿರು ಬಿಸಿಲು ಇದ್ದ ಕಾರಣ ನನಗೆ ಸ್ವಲ್ಪ ಸಮಾಧಾನ. ಸಂಜೆ ಮನೆಗೆ ಹೋಗೋ ಸಮಯ ಆಗಿತ್ತು ಆಗಲೂ ಮಳೆ ಬರುವ ಸೂಚನೆ ಇರಲ್ಲಿಲ್ಲ. ನಾನು ಬಸ್ ಇಳಿದು ಮನೆ ಕಡೆ ಹೋಗುತ್ತಿದ್ದೆ ಅಷ್ಟರಲ್ಲಿ ಹನಿ ಹನಿ ಮಳೆ ಶುರು ಆಯ್ತು ಛತ್ರಿ ಬೇರೆ ಇರಲಿಲ್ಲ ಆ ಹನಿ ಹನಿ ಮಳೆಗೆ ಒದ್ದೆಯಾಗಿ ಮುಂದೆ ನಡೆದೆ ಮಳೆ ಜೋರಾಗಿಯೇ ಬರಲು ಶುರು ಆಯಿತು ಮನೆ ಸೇರುತ್ತಿದ್ದಂತೆ ನಾನು ಫುಲ್ ಒದ್ದೆ ಆಗಿದ್ದೆ. ಅಮ್ಮನ ಕೈಯಿಂದ ಬೈಗುಳ ಕೇಳಲು ರೆಡಿ ಆಗಿದ್ದೆ, ನೋಡು ನಾನು ಹೇಳಿದ ಮಾತು ಎಲ್ಲಿ ಕೇಳ್ತಿಯಾ ನಾನು ಹೇಳಿದಾಗಲೇ ಬಂದು ಛತ್ರಿ ತೆಗೆದುಕೊಂಡು ಹೋಗಿದ್ದರೆ ಹೀಗೆಲ್ಲ ಒದ್ದೆಯಾಗಿ ಬರಬೇಕಿತ್ತ? ಇವಾಗ ಜ್ವರ ನೆಗಡಿ ಆಗ್ಲಿ ಆಮೇಲೆ ಇದೆ ನಿಂಗೆ ಹಬ್ಬ ಅಂತ ಹೆದರಿಸಿ ಹೋದ್ರು. ಅಮ್ಮ ಹೇಳಿದ ಮಾತು ಸುಳ್ಳಾಗಿದ್ದು ಉಂಟೆ!? ಅಮ್ಮ ಹೇಳಿದಂತೆ ರಾತ್ರಿ ಚಳಿ , ಜ್ವರ , ನೆಗಡಿ ಆಗಿತ್ತು. ಅಮ್ಮನ ಮಾತಿನಿಂದಲೇ ಜ್ವರ ಬಂದ ಹಾಗೆ ಅನಿಸುತಿತ್ತು. ಅದಕ್ಕೆ ದೊಡ್ಡೋರು ಹೇಳೋ ಮಾತು ಕೇಳಬೇಕು ಅಂತ ಹೇಳೋದು ಅನ್ಸತ್ತೆ.
No comments:
Post a Comment